Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಈ ಹೊತ್ತಿನ ಹೊತ್ತಿಗೆ
  5. ಜನಜಾಗೃತಿಯ ತಮಟೆ ‘ನಾನೇಕೆ ರಾಜೀನಾಮೆ...

ಜನಜಾಗೃತಿಯ ತಮಟೆ ‘ನಾನೇಕೆ ರಾಜೀನಾಮೆ ನೀಡಿದೆ?’

ವಾರ್ತಾಭಾರತಿವಾರ್ತಾಭಾರತಿ18 Oct 2020 12:10 AM IST
share
ಜನಜಾಗೃತಿಯ ತಮಟೆ ‘ನಾನೇಕೆ ರಾಜೀನಾಮೆ ನೀಡಿದೆ?’

ಐಎಎಸ್ ಅಧಿಕಾರಿಗಳನ್ನೇ ಬಳಸಿಕೊಂಡು ಸರ್ವಾಧಿಕಾರಿ ಮನಸ್ಸುಗಳು ಪ್ರಜಾಸತ್ತೆಯನ್ನು ಬುಡಮೇಲು ಮಾಡುತ್ತಿರುವ ಸಂದರ್ಭದಲ್ಲಿ, ಸರಕಾರದ ಸಂವಿಧಾನ ವಿರೋಧಿ ನೀತಿಗಳನ್ನು ವಿರೋಧಿಸಿ ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ರಾಜೀನಾಮೆ ನೀಡಿದರು. ದೇಶಾದ್ಯಂತ ಬೆರಳೆಣಿಕೆಯ ಐಎಎಸ್ ಅಧಿಕಾರಿಗಳು ಸರಕಾರದ ಜನವಿರೋಧಿ ನೀತಿಯ ವಿರುದ್ಧ ಪ್ರತಿಭಟಿಸುತ್ತಿದ್ದ ಆ ಸಂದರ್ಭದಲ್ಲಿ ಶಶಿಕಾಂತ್ ಸೆಂಥಿಲ್ ಅವರ ರಾಜೀನಾಮೆ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಯಿತು. ಮುಂದೆ, ಸಿಎಎ ವಿರುದ್ಧದ ರಾಷ್ಟ್ರವ್ಯಾಪಿ ಹೋರಾಟಕ್ಕೆ ಸೆಂಥಿಲ್ ರಾಜೀನಾಮೆ ಸಾಕಷ್ಟು ಶಕ್ತಿಯನ್ನು ನೀಡಿತು.

ಸೆಂಥಿಲ್ ಅವರು ರಾಜೀನಾಮೆ ನೀಡಿದ್ದು ಮಾತ್ರವಲ್ಲ, ಸಿಎಎ ವಿರುದ್ಧದ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ಸರಕಾರದ ಸಂವಿಧಾನ ವಿರೋಧಿ ನೀತಿಗಳನ್ನು ಒಬ್ಬ ಮಾಜಿ ಐಎಎಸ್ ಅಧಿಕಾರಿಯಾಗಿ ಬೀದಿಗಿಳಿದು ಪ್ರತಿಭಟಿಸುತ್ತಿರುವುದು ಹೋರಾಟದ ವಿಶ್ವಾಸಾರ್ಹತೆಯನ್ನು ಹೆಚ್ಚಿಸಿತು. ಇದೇ ಸಂದರ್ಭದಲ್ಲಿ ರಾಜೀನಾಮೆ ನೀಡಿದ ಸೆಂಥಿಲ್ ವಿರುದ್ಧ ವ್ಯಾಪಕ ಟೀಕೆಗಳೂ ವ್ಯಕ್ತವಾದವು. ಕೆಲವು ದುಷ್ಕರ್ಮಿಗಳು ಅವರ ಮೇಲೆ ಸುಳ್ಳು ಆರೋಪಗಳನ್ನು ಮಾಡುತ್ತಾ ವ್ಯಕ್ತಿತ್ವಕ್ಕೆ ಕಳಂಕ ತರುವ ಸಂಚು ನಡೆಸಿದರು. ಇನ್ನು ಕೆಲವರು ಸೆಂಥಿಲ್, ವ್ಯವಸ್ಥೆಯೊಳಗಿದ್ದೇ ಅದನ್ನು ಸುಧಾರಣೆ ಮಾಡಲು ಯತ್ನಿಸಬೇಕಾಗಿತ್ತು ಎಂದು ತಕರಾರು ತೆಗೆದರು. ಈ ಎಲ್ಲ ಟೀಕೆಗಳಿಗೆ ಉತ್ತರವೆಂಬಂತೆ ಚೆನ್ನೈಯಲ್ಲಿ ಮಾಡಿದ ಭಾಷಣವೊಂದರಲ್ಲಿ ‘ನಾನೇಕೆ ರಾಜೀನಾಮೆ ನೀಡಿದೆ?’ ಎನ್ನುವುದರ ಕಾರಣವನ್ನು ವಿವರಿಸಿದರು. ಆ ಸುದೀರ್ಘ ಭಾಷಣವನ್ನು ಬರಹಕ್ಕಿಳಿಸಿರುವ ಅಭಿರುಚಿ ಪ್ರಕಾಶನ ಮೈಸೂರು ಇವರು, ಕಿರು ಪುಸ್ತಕವಾಗಿಸಿದ್ದಾರೆ. ಇಲ್ಲಿ ಹಂಚಿಕೊಂಡಿರುವ ಮಾತುಗಳು ಕೇವಲ ಸೆಂಥಿಲ್ ಅವರ ಹೃದಯಬಡಿತ ಮಾತ್ರವಲ್ಲ, ಈ ದೇಶದ ಸಂವಿಧಾನದ ಹೃದಯ ಬಡಿತ ಕೂಡ. ಮಾತಿನ ಕೊನೆಯಲ್ಲಿ ಅವರು ಹೇಳುತ್ತಾರೆ ‘‘....ಪ್ರಜಾಪ್ರಭುತ್ವ ಎನ್ನೋದು ಒಂದು ತುಂಬಾ ಸಂಕೀರ್ಣ ವಿಷಯ. ಅದು ಸರಳ ಅಲ್ಲ. ನಾವು ಯಾವಾಗ ಸ್ವಲ್ಪ ಸೋಮಾರಿ ಆಗುತ್ತೇವೋ ಆಗ ಪ್ರಜಾಪ್ರಭುತ್ವ ನಮ್ಮ ಕೈ ತಪ್ಪಿ ಹೋಗಿ ಬಿಡುತ್ತದೆ....’’ ಸೋಮಾರಿ ಸಮಾಜವನ್ನು ತಟ್ಟಿ ಎಬ್ಬಿಸುವ ಕೆಲಸವನ್ನು ವ್ಯವಸ್ಥೆಯೊಳಗೆ ಇದ್ದು ಮಾಡುವಂತಿಲ್ಲ. ಇಡೀ ವ್ಯವಸ್ಥೆಯನ್ನೇ ಕೆಡಿಸಿ, ತನ್ನ ಗುಲಾಮನನ್ನಾಗಿಸಿಕೊಂಡಿರುವ ಶಕ್ತಿಗಳನ್ನು ಸೋಲಿಸಬೇಕಾದರೆ ಒಂದು ಅಹಿಂಸಾತ್ಮಕ ಜನಾಂದೋಲನಕ್ಕೆ ಅಗತ್ಯವನ್ನು ಈ ಕೃತಿಯಲ್ಲಿ ಸೆಂಥಿಲ್ ಎತ್ತಿ ಹಿಡಿಯುತ್ತಾರೆ.

ಸೆಂಥಿಲ್ ರಾಜೀನಾಮೆಯ ಜೊತೆಗೆ ತಳಕು ಹಾಕಿಕೊಂಡಿರುವ, ‘ಎನ್‌ಪಿಆರ್, ಎನ್‌ಆರ್‌ಐಸಿ, ಸಿಎಎ’ ಎಂಬ ನಿಗೂಢ ಅಕ್ಷರಗಳ ಒಗಟುಗಳನ್ನು ‘ವಾರ್ತಾಭಾರತಿ’ಯ ಪ್ರಧಾನ ಸಂಪಾದಕ, ಚಿಂತಕ ಎ.ಎಸ್.ಪುತ್ತಿಗೆ ಅವರು ಎಳೆ ಎಳೆಯಾಗಿ ಬಿಡಿಸಿದ್ದಾರೆ. ಸಿಎಎ, ಎನ್‌ಆರ್‌ಸಿ ಬಗ್ಗೆ ತಪ್ಪು ಮಾಹಿತಿಗಳನ್ನು ನೀಡುತ್ತಾ ಸರಕಾರ ಜನರನ್ನು ಗೊಂದಲಗೊಳಿಸಿರುವಾಗ, ಈ ಬಗ್ಗೆ ಜನರಿಗೆ ಸ್ಪಷ್ಟವಾಗಿ, ಸರಳವಾಗಿ ಆ ಅಕ್ಷರಗಳು ತನ್ನೊಳಗೆ ಬಚ್ಚಿಕೊಂಡಿರುವ ಸಂವಿಧಾನ ವಿರೋಧಿ ರಾಜಕೀಯವನ್ನು ತಲುಪಿಸುವುದು ಇಂದಿನ ಅಗತ್ಯ. ಸಿಎಎ ಒಳಗಿರುವ ವಿರೋಧಾಭಾಸಗಳು, ರಾಷ್ಟ್ರೀಯ ಪೌರತ್ವದ ನೋಂದಣಿಯ ಇತಿಹಾಸ ಮತ್ತು ಸದ್ಯ ಪ್ರಭುತ್ವ ಅದನ್ನು ಮುಂದಿಟ್ಟು ಮಾಡಲು ಹೊರಟಿರುವ ಪ್ರಮಾದಗಳು, ಜನಗಣತಿಯ ನೆಪದಲ್ಲೇ ಎನ್‌ಆರ್‌ಸಿಯನ್ನು ಜಾರಿಗೊಳಿಸುವ ಸರಕಾರದ ಸಂಚು...ಇತ್ಯಾದಿಗಳನ್ನು ಸವಿವರವಾಗಿ ಓದುಗರ ಮುಂದಿಡುತ್ತದೆ.

ವಾರ್ತಾಭಾರತಿ ದಿನಪತ್ರಿಕೆಯ ಸಂಪಾದಕೀಯ ‘ಅಮಿತ್ ಶಾರ ಮುಷ್ಟಿಯೊಳಗಿರುವ ಗುಬ್ಬಚ್ಚಿ’ ಈ ಪುಟ್ಟ ಕೃತಿಯಲ್ಲಿರುವ ಇನ್ನೊಂದು ಮಹತ್ವದ ಲೇಖನ. ‘ಎನ್‌ಪಿಆರ್‌ನಲ್ಲಿ ಯಾವುದೇ ದಾಖಲೆ ಕೊಡಬೇಕಾಗಿಲ್ಲ. ಗೊತ್ತಿಲ್ಲದ ಪ್ರಶ್ನೆಗಳಿಗೆ ಉತ್ತರ ನೀಡಬೇಕಾಗಿಲ್ಲ’ ಎಂಬ ಅಮಿತ್ ಶಾ ಅವರ ಮಾತುಗಳನ್ನು ಮುಂದಿಟ್ಟುಕೊಂಡು ‘ಎನ್‌ಪಿಆರ್ ಎನ್ನುವುದು ಅಮಿತ್ ಶಾ ಅವರ ಮುಷ್ಟಿಯೊಳಗಿರುವ ಗುಬ್ಬಚ್ಚಿ’ ಎಂದು ಈ ಲೇಖನ ಹೇಳುತ್ತದೆ. ಎಲ್ಲಿಯವರೆಗೆ ಆ ಕಾಯ್ದೆ ಅಮಿತ್ ಶಾ ಮುಷ್ಟಿಯೊಳಗೆ ಇರುತ್ತದೆಯೋ ಅಲ್ಲಿಯವರೆಗೆ ಆ ಗುಬ್ಬಚ್ಚಿಯ ಪ್ರಾಣ ಅಪಾಯದಲ್ಲಿದೆ ಎಂದೇ ಅರ್ಥ, ಎಂದು ಸಂಪಾದಕೀಯ ಅಭಿಪ್ರಾಯ ಪಡುತ್ತದೆ.

ಇದೊಂದು ಪುಟ್ಟ ಕೃತಿಯಾಗಿದ್ದರೂ, ಭವಿಷ್ಯದಲ್ಲಿ ನಾವು ಎದುರುಗೊಳ್ಳುವ ಆತಂಕಕಾರಿ ದಿನಗಳ ಕುರಿತಂತೆ ನಮ್ಮನ್ನು ತಟ್ಟಿ ಎಚ್ಚರಿಸುವ ತಮಟೆಯಂತಿದೆ. 52 ಪುಟಗಳ ಈ ಕೃತಿಯ ಮುಖಬೆಲೆ 40 ರೂಪಾಯಿ. ಆಸಕ್ತರು 99805 60013 ದೂರವಾಣಿಯನ್ನು ಸಂಪರ್ಕಿಸಬಹುದು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X