ಬಿಹಾರದ ಸಾಧನೆ ಎಂದು ಹೈದರಾಬಾದ್ ಫ್ಲೈಓವರ್ ಚಿತ್ರ ಶೇರ್ ಮಾಡಿದ ಬಿಜೆಪಿ ಶಾಸಕ !
ಫೋಟೊ: Twitter
ಹೊಸದಿಲ್ಲಿ : ಬಿಹಾರದ ನಗರಾಭಿವೃದ್ಧಿ ಮತ್ತು ಗೃಹನಿರ್ಮಾಣ ಖಾತೆ ಸಚಿವ ಹಾಗೂ ಮುಝಫ್ಫರ್ ಪುರ್ ಬಿಜೆಪಿ ಶಾಸಕ ಸುರೇಶ್ ಕುಮಾರ್ ಶರ್ಮಾ ಅಕ್ಟೋಬರ್ 15ರಂದು ಫೇಸ್ಬುಕ್ ಹಾಗೂ ಟ್ವಿಟ್ಟರ್ನಲ್ಲಿ ಬೀದಿದೀಪಗಳು ಉರಿಯುತ್ತಿರುವ ಫ್ಲೈಓವರ್ ಒಂದರ ಚಿತ್ರ ಷೇರ್ ಮಾಡಿದ್ದರು.
ಮುಝಫ್ಫರ್ ಪುರ್ ನಲ್ಲಿ 17,554 ಬೀದಿದೀಪ ಅಳವಡಿಸಲಾಗಿದೆ ಎಂದು ಹೇಳಿಕೊಂಡಿದ್ದರು. ತಮ್ಮ ಕ್ಷೇತ್ರದಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳ ಪಟ್ಟಿ ವಿವರಿಸುವಲ್ಲಿ ಶರ್ಮಾ ಇದನ್ನು ತಮ್ಮ ಸಾಧನೆ ಎಂದು ಬಿಂಬಿಸಿಕೊಂಡಿದ್ದರು.
ಆದರೆ ವಾಸ್ತವವಾಗಿ ಶರ್ಮಾ ಪೋಸ್ಟ್ ಮಾಡಿದ ಚಿತ್ರ ಮುಝಫ್ಫರ್ ಪುರದ್ದಲ್ಲ. ಇದು ಹೈದರಾಬಾದ್ನ ಬೈರಮಲ್ ಗುಡ್ ಜಂಕ್ಷನ್ನ ಫ್ಲೈ ಓವರ್ ಚಿತ್ರ. ಇದನ್ನು ಕಳೆದ ಆಗಷ್ಟ್ನಲ್ಲಿ ತೆಲಂಗಾಣ ರಾಷ್ಟ್ರೀಯ ಸಮಿತಿಯ ಕೆ. ತಾರಕ ರಾಮರಾವ್ ಉದ್ಘಾಟಿಸಿದ್ದರು.
ಈ ಚಿತ್ರವನ್ನು ಟಿಆರ್ಎಸ್ ಆಗಸ್ಟ್ 9ರಂದು ಟ್ವಿಟ್ಟರ್ನಲ್ಲಿ ಶೇರ್ ಮಾಡಿ ಮರುದಿನ ಈ ಫ್ಲೈಓವರ್ ಉದ್ಘಾಟನೆಯಾಗುತ್ತಿದೆ ಎಂದು ಹೇಳಿತ್ತು. ಇದಕ್ಕೆ ಸಂಬಂಧಿಸಿದ ಮತ್ತಷ್ಟು ಚಿತ್ರಗಳನ್ನೂ ಅವರು ಶೇರ್ ಮಾಡಿದ್ದರು.
काम किया है, काम करेंगे, मुजफ्फरपुर का विकास करेंगे |#Development_for_Muzaffarpur #Biharkapragatipath @BJP4Bihar @Bjpmuzaffarpur1 pic.twitter.com/DTQXVJzLwD
— Suresh Kumar Sharma (@SureshSharmamuz) October 15, 2020
Happy to be throwing open yet another flyover in #Hyderabad tomorrow that has been completed as part of #SRDP (Strategic Road Development Plan)
— KTR (@KTRTRS) August 9, 2020
RHS flyover at Bairamalguda junction, 780 mt long coating 26.5Cr@bonthurammohan @CommissionrGHMC pic.twitter.com/nb0OLqRYvC