Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಓ ಮೆಣಸೇ… .

ಓ ಮೆಣಸೇ… .

ಪಿ.ಎ.ರೈಪಿ.ಎ.ರೈ19 Oct 2020 12:10 AM IST
share
ಓ ಮೆಣಸೇ… .

ಜೀವಗಳನ್ನು ಅಪಾಯಕ್ಕೊಡ್ಡಿ ಹಬ್ಬ ಆಚರಿಸಬೇಕೆಂದು ಯಾವ ಧರ್ಮವೂ ಹೇಳಿಲ್ಲ -ಡಾ.ಹರ್ಷವರ್ಧನ್, ಕೇಂದ್ರ ಸಚಿವ
ಜೀವಗಳನ್ನು ಬಲಿಕೊಟ್ಟು ಧರ್ಮವನ್ನು ಉಳಿಸಿ ಎಂದು ಹೇಳಿದೆಯೇ?


ಪ್ರಧಾನಿ ಮೋದಿ ಸರಕಾರ ಕೇಂದ್ರದಲ್ಲಿ ಇರುವುದರಿಂದ ಬಿಹಾರ ಸಾಕಷ್ಟು ಅಭಿವೃದ್ಧಿ ಕಂಡಿದೆ-ಜೆ.ಪಿ.ನಡ್ಡಾ, ಬಿಜೆಪಿ ಅಧ್ಯಕ್ಷ
ಅಪರಾಧ ಪ್ರಕರಣಗಳ ಬಗ್ಗೆ ಹೇಳುತ್ತಿದ್ದಾರೆ.


ಒಂದು ಜಾತಿಯಿಂದ ಯಾವ ಪಕ್ಷವೂ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ -ದೇವೇಗೌಡ, ಮಾಜಿ ಪ್ರಧಾನಿ 
ಒಕ್ಕಲಿಗರ ಜೊತೆಗೆ ಲಿಂಗಾಯತ ಜಾತಿಯೂ ಬೇಕು ಅಂತೀರಾ?


 ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಶತಮಾನದ ಮಹಾ ಸುಳ್ಳುಗಾರ- ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ
ಸಹಸ್ರಮಾನದ ಸುಳ್ಳುಗಾರ ಪ್ರಶಸ್ತಿಯನ್ನು ಪಿತಾಜಿಯವರಿಗೇ ಮೀಸಲಿಟ್ಟಿದ್ದೀರಿ ಎಂದಾಯಿತು.


ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವದ ಬದಲು ಸರ್ವಾಧಿಕಾರಿ ಶೈಲಿಯ ಆಡಳಿತ ವ್ಯವಸ್ಥೆ ಇದ್ದರೆ ಸೂಕ್ತ - ವಿಜಯ್ ದೇವರಕೊಂಡ, ತೆಲುಗು ನಟ
ನೀವು ಸರ್ವಾಧಿಕಾರಿ ಜಾತಿಯಿಂದಲೇ ಬಂದಿದ್ದೀರಿ ಎನ್ನುವುದಕ್ಕೆ ಈ ಮಾತೇ ಸಾಕು.


ನಾನು ಬಿಜೆಪಿ ಸೇರಿದ್ದರಿಂದ ಭಾರತ್ ಮಾತಾಕಿ ಜೈ ಎನ್ನುವುದನ್ನು ಪಕ್ಷ ನನಗೆ ಕಲಿಸಿದೆ - ಸಿ.ಟಿ.ರವಿ, ಬಿಜೆಪಿ ರಾಷ್ಟ್ರೀಯ ಪ್ರ.ಕಾರ್ಯದರ್ಶಿ
ಒಬ್ಬ ಭಾರತೀಯನಾಗಿ ಅಷ್ಟನ್ನು ಹೇಳುವುದಕ್ಕಾಗಿ ಒಂದು ಪಕ್ಷ ಸೇರಬೇಕೇ? ಇದು ನಿಮ್ಮ ದೇಶಭಕ್ತಿಯ ದಾರಿದ್ರವನ್ನು ಹೇಳುತ್ತದೆ.


ಸಂಸದೆ ಶೋಭಾ ಕರಂದ್ಲಾಜೆಗೆ ಗಂಡನನ್ನು ಕಳೆದುಕೊಂಡ ಹೆಣ್ಣಿನ ನೋವಿನ ಅರಿವಿಲ್ಲ - ಉಮಾಶ್ರೀ, ಮಾಜಿ ಸಚಿವೆ
ಗಂಡನಿದ್ದೂ ಅದನ್ನು ಹೇಳಿಕೊಳ್ಳಲಾಗದೇ ಇರುವುದು ಸಣ್ಣ ನೋವೇನೂ ಅಲ್ಲ. 


ಕೇರಳ ಮಾದರಿಯಲ್ಲಿ ರಾಜ್ಯ ಆರೋಗ್ಯ ಇಲಾಖೆ ಸುಧಾರಣೆ ಮಾಡಲು ಕ್ರಮ ಕೈಗೊಳ್ಳಲಾಗುವುದು -ಡಾ.ಕೆ.ಸುಧಾಕರ್, ಸಚಿವ
ಕೇರಳ ಮಾದರಿಯಲ್ಲೇ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಲು ಮತದಾರ ನಿರ್ಧರಿಸಿದ್ದಾನಂತೆ.


ಇಡೀ ಬಿಹಾರವೇ ನನ್ನ ಕುಟುಂಬ - ನಿತೀಶ್ ಕುಮಾರ್, ಬಿಹಾರ ಮುಖ್ಯಮಂತ್ರಿ
ಹಾಗೆಂದು ಇಡೀ ಬಿಹಾರವನ್ನು ನುಂಗಲು ಹೊರಟಿರುವುದೇ?


ಕೇಡರ್‌ಗಳೇ ಲೀಡರ್‌ಗಳಾಗುವ ಭಾರತದ ಏಕೈಕ ಪಕ್ಷ ಬಿಜೆಪಿ - ಸಿ.ಟಿ.ರವಿ, ಸಚಿವ
ಜನರ ಕಿವಿಗೆ ಅದು ಕೇಡಿಗಳು ಎಂದು ಕೇಳಿಸಿದೆ.


ಆರ್.ಆರ್.ನಗರ,ಶಿರಾ ಉಪಚುನಾವಣೆಗಳಲ್ಲಿ ಬಿಜೆಪಿ ಈಗಾಗಲೇ ಗೆದ್ದಾಗಿದೆ. - ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ
ಅಂದರೆ ಇವಿಎಂ ಹೈಜಾಕ್ ಕೆಲಸ ಪೂರ್ಣವಾಗಿದೆಯೇ?


ಜೆಡಿಎಸ್‌ನವರು ಬೇರೆಯವರ ಕುದುರೆ ಏರಿ ಅಧಿಕಾರ ನಡೆಸುವವರು - ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ
 ಕಾಂಗ್ರೆಸ್ ಕತ್ತೆಗಿಂತ ವಾಸಿ ಎಂದರಂತೆ ಕುಮಾರಸ್ವಾಮಿ.


ಸುಳ್ಳಿಗೆ ಸೀಮಿತ ಅವಧಿ ಇದೆ. ಸತ್ಯ ಶಾಶ್ವತವಾಗಿರುತ್ತದೆ - ಪ್ರಕಾಶ್ ಜಾವ್ಡೇಕರ್, ಕೇಂದ್ರ ಸಚಿವ
ಜನರು ಅದೊಂದೇ ಭರವಸೆಯಿಂದ ಕಾಯುತ್ತಿದ್ದಾರೆ.


ಹೆಣ್ಣು ಮಕ್ಕಳಿಗೆ ವೌಲ್ಯಗಳನ್ನು ಕಲಿಸಿಕೊಟ್ಟರೆ ಮಾತ್ರ ಹಾಥರಸ್‌ನಂತಹ ಅಪರಾಧಗಳನ್ನು ತಡೆಯಲು ಸಾಧ್ಯ - ಸುರೇಂದ್ರ ಸಿಂಗ್, ಉ.ಪ್ರ. ಶಾಸಕ
ಬಹುಶಃ ಅತ್ಯಾಚಾರಿಗಳ ಮೂಲಕ ಅದನ್ನು ಕಲಿಸುವ ಪ್ರಯತ್ನ ನಡೆಯುತ್ತಿರಬೇಕು.


ವಿರೋಧ ಪಕ್ಷದ ಜವಾಬ್ದಾರಿ ನಿರ್ವಹಿಸಲು ಕಾಂಗ್ರೆಸ್ ವಿಫಲ- ಕೆ.ಎಸ್. ಈಶ್ವರಪ್ಪ, ಸಚಿವ

ಒಪ್ಪತಕ್ಕ ಮಾತು. ಇಲ್ಲವಾದರೆ ಸರಕಾರ ಇಷ್ಟು ಬೇಜವಾಬ್ದಾರಿಯಿಂದ ವರ್ತಿಸಲು ಸಾಧ್ಯವೇ?


ಯಾವತ್ತೂ ನದಿ ಮೂಲ, ಋಷಿ, ಮೂಲ, ಹೆಣ್ಣಿನ ಮೂಲ ಹುಡುಕಬಾರದು - ಸಿ.ಟಿ.ರವಿ, ಸಚಿವ
ನಿಮ್ಮ ಸಂಪತ್ತಿನ ಮೂಲವನ್ನು ಹುಡುಕಬಹುದೇ?


ವಿರೋಧ ಪಕ್ಷಗಳು ಗಲಭೆಗಳನ್ನು ಪ್ರಚೋದಿಸಲು ಮತ್ತು ಅಭಿವೃದ್ಧಿಗೆ ಅಡ್ಡಿಯುಂಟು ಮಾಡಲು ಪಿತೂರಿಗಳಲ್ಲಿ ತೊಡಗಿವೆ - ಯೋಗಿ ಆದಿತ್ಯನಾಥ್, ಉ.ಪ್ರ. ಮುಖ್ಯಮಂತ್ರಿ
ಪ್ರಚೋದಿಸಿ ಮತ್ತು ಅಡ್ಡಿಯುಂಟು ಮಾಡಿಯೇ ತಾನೆ ತಾವು ಮುಖ್ಯಮಂತ್ರಿಯಾಗಿರುವುದು?


ಎರಡು ರಾಷ್ಟ್ರೀಯ ಪಕ್ಷಗಳು ಜೆಡಿಎಸ್ ಪಕ್ಷವನ್ನು ಮುಗಿಸಲು ಹೊರಟಿವೆ - ಎಚ್.ಡಿ.ರೇವಣ್ಣ ,ಮಾಜಿ ಸಚಿವ
ಸ್ವತಃ ಮುಗಿಯುತ್ತಿರುವವರನ್ನು ಇನ್ನೊಬ್ಬರು ಮುಗಿಸುವ ಅಗತ್ಯವಿದೆಯೆ?


ಸಿಬಿಐ ದಾಳಿಗಳು ನಡೆದಾಗಲೆಲ್ಲ ರಾಜಕೀಯ ಪ್ರೇರಿತ ಎನ್ನುವುದು ಸಾಮಾನ್ಯವಾಗಿದೆ -ಪ್ರಹ್ಲಾದ್ ಜೋಶಿ, ಕೇಂದ್ರ ಸಚಿವ
ಸಿಬಿಐ ಮೇಲೆ ನಡೆಯುತ್ತಿರುವ ದಾಳಿ ಯಾವುದರ ಪ್ರೇರಿತ?


ಸಿಬಿಐ ಬಿಜೆಪಿಯ ಬೀದಿ ನಾಯಿ - ದಿನೇಶ್ ಗುಂಡೂರಾವ್, ಕಾಂಗ್ರೆಸ್ ಮುಖಂಡ
ಯುಪಿಎ ಸರಕಾರದ ಕಾಲದಲ್ಲಿ ಅದು ಹೈಬ್ರಿಡ್ ತಳಿಯ ನಾಯಿಯಾಗಿತ್ತೇ? 


ಭಾರತೀಯ ಜೀವನ ದೃಷ್ಟಿಕೋನಕ್ಕೆ ಇಡೀ ವಿಶ್ವವೇ ಬೆರಗುಗೊಂಡಿದೆ -ಮೋಹನ್ ಭಾಗವತ್, ಆರೆಸ್ಸೆಸ್ ಮುಖ್ಯಸ್ಥ
ಈ ದೇಶದ ಬಡವರು ಊಟವಿಲ್ಲದೆ ಜೀವನ ನಡೆಸುತ್ತಿರುವ ಪರಿಗೆ ಇರಬಹುದು.


ಭಯೋತ್ಪಾದಕ ದಾಳಿಗಳು ನರೇಂದ್ರ ಮೋದಿ ಆಡಳಿತದಲ್ಲಿ ಹಳೆಯ ಸಂಗತಿಯಂತಾಗಿದೆ - ವಿಜಯ ರೂಪಾನಿ, ಗುಜರಾತ್ ಮುಖ್ಯಮಂತ್ರಿ
ಅದನ್ನೀಗ ಸರಕಾರ ನೋಟು ನಿಷೇಧ, ಜಿಎಸ್‌ಟಿ, ಲಾಕ್‌ಡೌನ್ ಹೆಸರಿನಲ್ಲಿ ಸ್ವತಃ ಆಯೋಜಿಸುತ್ತಿದೆ.


ನಮ್ಮ ತ್ಯಾಗದ ಫಲವಾಗಿ ಯಡಿಯೂರಪ್ಪ ಇಂದು ಮುಖ್ಯ ಮಂತ್ರಿಯಾಗಿದ್ದಾರೆ - ಎಂ.ಟಿ.ಬಿ. ನಾಗರಾಜ್, ವಿ.ಪ. ಸದಸ್ಯ
ಮಾನ ಮರ್ಯಾದೆಗಳನ್ನು ತ್ಯಾಗ ಮಾಡುವುದೆಂದರೆ ಸಣ್ಣ ವಿಷಯವಲ್ಲ ಬಿಡಿ.


ಈ ದೇಶದ ಆತ್ಮವಾದ ಸಂವಿಧಾನ ರಕ್ಷಣೆಗೆ ಕಾಂಗ್ರೆಸ್ ಯಾವ ತ್ಯಾಗಕ್ಕೂ ಸಿದ್ಧ - ವಿನಯ್ ಕುಮಾರ್ ಸೊರಕೆ, ಮಾಜಿ ಸಚಿವ
ಸದ್ಯಕ್ಕೆ ರಾಜಕೀಯದಿಂದ ನಿವೃತ್ತಿಯನ್ನು ಘೋಷಿಸುವುದೇ ನೀವು ಮಾಡಬಹುದಾದ ದೊಡ್ಡ ತ್ಯಾಗ.


ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆಯನ್ನು ದಿಢೀರ್ ಬದಲಾವಣೆ ಮಾಡಿರುವುದರಿಂದ ಜನರಿಗೆ ನನ್ನ ಬಗ್ಗೆ ತಪ್ಪು ಸಂದೇಶ ರವಾನೆಯಾಗುತ್ತದೆ- ಶ್ರೀರಾಮುಲು, ಸಚಿವ

ನೀವು ವರ್ಗಾವಣೆಗೊಂಡಿರುವ ಖಾತೆಯ ಕುರಿತಂತೆ ಜನರಿಗೆ ಆತಂಕ ಶುರುವಾಗಿದೆ.

share
ಪಿ.ಎ.ರೈ
ಪಿ.ಎ.ರೈ
Next Story
X