ಚೆನ್ನೈ ಕಳಪೆ ಬ್ಯಾಟಿಂಗ್ ಪ್ರದರ್ಶನ: ರಾಜಸ್ಥಾನ ಗೆಲುವಿಗೆ 126 ರನ್ ಗುರಿ

ಅಬುಧಾಬಿ: ಬ್ಯಾಟಿಂಗ್ ನಲ್ಲಿ ಕಳಪೆ ಪ್ರದರ್ಶನ ತೋರಿದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ರಾಜಸ್ಥಾನ ರಾಯಲ್ಸ್ ವಿರುದ್ಧ ಕನಿಷ್ಠ ಮೊತ್ತ ಗಳಿಸಿದ್ದು, ಗೆಲುವಿಗೆ 126 ರನ್ ಗುರಿ ನೀಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 125 ರನ್ ಗಳಿಸಿತು. ಆರಂಭಿಕ ಆಟಗಾರ ಸ್ಯಾಮ್ ಕುರ್ರನ್ 22, ನಾಯಕ ಧೋನಿ 28, ರವೀಂದ್ರ ಜಡೇಜ 35 ರನ್ ಬಾರಿಸಿದರು.
ರಾಜಸ್ಥಾನ ರಾಯಲ್ಸ್ ಪರ ಜೋಫ್ರ ಅರ್ಚರ್, ಕಾರ್ತಿಕ್ ತ್ಯಾಗಿ, ಶ್ರೇಯಸ್ ಗೋಪಾಲ್ ಹಾಗೂ ರಾಹುಲ್ ತೆವಾಟಿತ ತಲಾ ಒಂದು ವಿಕೆಟ್ ಪಡೆದರು.
Next Story





