ಪಕ್ಷ ವಿರೋಧಿ ಚಟುವಟಿಕೆ: ಜೆಡಿಎಸ್ ಪಕ್ಷದಿಂದ ಬಿ.ಎಚ್.ಚಂದ್ರಶೇಖರ್ ಉಚ್ಛಾಟನೆ
ಬೆಂಗಳೂರು, ಅ.19: ಬೆಂಗಳೂರು ಮಹಾನಗರ ಜನತಾದಳ(ಜಾತ್ಯತೀತ) ಪಕ್ಷದ ಮಹಾ ಪ್ರಧಾನಕಾರ್ಯದರ್ಶಿಯಾಗಿದ್ದ ಬಿ.ಎಚ್.ಚಂದ್ರಶೇಖರ್ ಅವರನ್ನು ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಜೆಡಿಎಸ್ ಪಕ್ಷದಿಂದ ಆರು ವರ್ಷಗಳ ಕಾಲ ಉಚ್ಚಾಟನೆ ಮಾಡಿ ಬೆಂಗಳೂರು ಮಹಾನಗರ ಜೆಡಿಎಸ್ ಅಧ್ಯಕ್ಷ ಆರ್.ಪ್ರಕಾಶ್ ಆದೇಶ ಹೊರಡಿಸಿದ್ದಾರೆ.
ಜೆಡಿಎಸ್ ಪಕ್ಷದಿಂದ ಇಂದು ಬೆಳಗ್ಗೆ ಉಚ್ಚಾಟನೆಗೊಂಡ ಬಿ.ಎಚ್.ಚಂದ್ರಶೇಖರ್, ತಮ್ಮ ಬೆಂಬಲಿಗರೊಂದಿರೆ ಸಂಜೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಮ್ಮುಖದಲ್ಲಿ ರಾಜರಾಜೇಶ್ವರಿನಗರದಲ್ಲಿ ಕಾಂಗ್ರೆಸ್ ಸೇರ್ಪಡೆಯಾದರು.
Next Story





