ಸ್ವಾತಂತ್ರ್ಯ ಹೋರಾಟಗಾರ ಕೃಷ್ಣಪ್ಪ ನಿಧನ
ಮಂಗಳೂರು, ಅ.19: ಸ್ವಾಂತಂತ್ರ್ಯ ಹೋರಾಟಗಾರ ಎಸ್.ಜಿ. ಕೃಷ್ಣಪ್ಪ(94) ರವಿವಾರ ನಗರದ ಬಳ್ಳಾಲ್‌ಭಾಗ್‌ನಲ್ಲಿರುವ ಸ್ವಗೃಹದಲ್ಲಿ ನಿಧನ ಹೊಂದಿದರು.
ಮೃತರು ಪತ್ನಿ, ಮೂವರು ಪುತ್ರಿಯರು ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ. ಮೂಲತಃ ತೀರ್ಥಹಳ್ಳಿ ತಾಲೂಕಿನ ಹುಂಚದ ಕಟ್ಟೆಯವರಾದ ಕೃಷ್ಣಪ್ಪ 1947ರಲ್ಲಿ ಮೈಸೂರಿನಲ್ಲಿ ನಡೆದಿದ್ದ ಸ್ವಾತಂತ್ರ್ಯ ಚಳುವಳಿಯಲ್ಲಿ ಪಾಲ್ಗೊಂಡು ಸೆರೆಮನೆ ವಾಸಕ್ಕೊಳಗಾಗಿದ್ದರು.
Next Story





