ಕೊರೋನ ಲಸಿಕೆಗಾಗಿ 100 ಕೋಟಿ ಸಿರಿಂಜ್ ಸಂಗ್ರಹ: ಯುನಿಸೆಫ್

ಜಿನೀವ (ಸ್ವಿಟ್ಸರ್‌ಲ್ಯಾಂಡ್), ಅ. 19: 2021ರ ಕೊನೆಯ ವೇಳೆಗೆ ಜಗತ್ತಿನಾದ್ಯಂತ 100 ಕೋಟಿ ಸಿರಿಂಜ್‌ಗಳನ್ನು ಸಂಗ್ರಹಿಸಿಡುವುದಾಗಿ ವಿಶ್ವಸಂಸ್ಥೆ ಸೋಮವಾರ ತಿಳಿಸಿದೆ. ಭವಿಷ್ಯದಲ್ಲಿ ಕೊರೋನ ವೈರಸ್‌ಗೆ ಲಸಿಕೆ ಸಿದ್ಧವಾದರೆ, ಅದನ್ನು ನೀಡುವುದಕ್ಕಾಗಿ ಈ ಸಿರಿಂಜ್‌ಗಳನ್ನು ಬಳಸಲಾಗುವುದು ಎಂದು ಅದು ಹೇಳಿದೆ.
ಲಸಿಕೆಗೆ ಮುಂಚಿತವಾಗಿ ದೇಶಗಳಿಗೆ ಪೂರೈಸುವುದಕ್ಕಾಗಿ ಈ ವರ್ಷದ ಕೊನೆಯ ವೇಳೆಗೆ ತನ್ನ ಉಗ್ರಾಣಗಳಲ್ಲಿ 52 ಕೋಟಿ ಸಿರಿಂಜ್‌ಗಳನ್ನು ಸಂಗ್ರಹಿಸಿಡುವ ಗುರಿಯನ್ನು ಹೊಂದಿರುವುದಾಗಿ ವಿಶ್ವಸಂಸ್ಥೆಯ ಮಕ್ಕಳ ನಿಧಿ ಯುನಿಸೆಫ್ ಹೇಳಿದೆ.
‘‘ಜಗತ್ತಿಗೆ ಲಸಿಕೆಯ ಡೋಸ್‌ಗಳಷ್ಟೇ ಸಂಖ್ಯೆಯ ಸಿರಿಂಜ್‌ಗಳ ಅಗತ್ಯವಿದೆ’’ ಎಂದು ಯುನಿಸೆಫ್ ಹೇಳಿಕೆಯೊಂದರಲ್ಲಿ ತಿಳಿಸಿದೆ.
Next Story





