4 ಕೋಟಿ ದಾಟಿದ ಕೊರೋನ ವೈರಸ್ ಸೋಂಕು ಪ್ರಕರಣ

ಪ್ಯಾರಿಸ್, ಅ. 19: ಜಗತ್ತಿನಾದ್ಯಂತ ಖಚಿತಗೊಂಡ ಕೊರೋನ ವೈರಸ್ ಸೋಂಕು ಪ್ರಕರಣಗಳ ಸಂಖ್ಯೆ ಸೋಮವಾರ 4 ಕೋಟಿಯನ್ನು ದಾಟಿದೆ ಎಂದು ಎಎಫ್‌ಪಿ ಸುದ್ದಿ ಸಂಸ್ಥೆ ಸಂಗ್ರಹಿಸಿರುವ ಅಂಕಿಸಂಖ್ಯೆಗಳು ತಿಳಿಸಿವೆ.
ಜಗತ್ತಿನಾದ್ಯಂತ ಒಟ್ಟು 4 ಕೋಟಿ 234 ಸೋಂಕು ಪ್ರಕರಣಗಳು ಹಾಗೂ 11 ಲಕ್ಷದ 13 ಸಾವಿರದ 896 ಸಾವುಗಳು ಸಂಭವಿಸಿವೆ.
ಜಾಗತಿಕ ಸೋಂಕು ಪ್ರಕರಣಗಳ ಅರ್ಧಕ್ಕೂ ಹೆಚ್ಚು ಮೂರು ದೇಶಗಳಿಂದ ವರದಿಯಾಗಿವೆ. ಅವುಗಳೆಂದರೆ: ಅಮೆರಿಕ (81,54,935), ಭಾರತ (75,50,273) ಮತ್ತು ಬ್ರೆಝಿಲ್ (52,35,344).
ಕೇವಲ ಕಳೆದ ಏಳು ದಿನಗಳಲ್ಲಿ 25 ಲಕ್ಷಕ್ಕೂ ಅಧಿಕ ಸೋಂಕು ಪ್ರಕರಣಗಳು ವರದಿಯಾಗಿವೆ. ಇದು ಕಳೆದ ವರ್ಷ ಚೀನಾದಲ್ಲಿ ಮೊದಲ ಬಾರಿಗೆ ಕೊರೋನ ವೈರಸ್ ಕಾಣಿಸಿಕೊಂಡ ಬಳಿಕದ ಅತಿ ಹೆಚ್ಚಿನ ಒಂದು ವಾರದ ಸಂಖ್ಯೆಯಾಗಿದೆ.
Next Story





