ಹ್ಯೂಸ್ಟನ್: ಪೊಲೀಸರ ಮೇಲೆ ದಾಳಿ; ಅಧಿಕಾರಿ ಸಾವು

ಹ್ಯೂಸ್ಟನ್ (ಅಮೆರಿಕ), ಅ. 21: ಮಂಗಳವಾರ ನಡೆದ ದಾಳಿಯೊಂದರಲ್ಲಿ ಅಮೆರಿಕದ ಹ್ಯೂಸ್ಟನ್ ನಗರದ ಪೊಲೀಸ್ ಸಿಬ್ಬಂದಿಯೊಬ್ಬರು ಮೃತಪಟ್ಟಿದ್ದಾರೆ ಹಾಗೂ ಇನ್ನೊಬ್ಬರು ಗಾಯಗೊಂಡಿದ್ದಾರೆ ಎಂದು ನಗರ ಪೊಲೀಸ್ ಮುಖ್ಯಸ್ಥ ಆರ್ಟ್ ಅಸೆವೆಡೊ ತಿಳಿಸಿದ್ದಾರೆ.
ನೈರುತ್ಯ ಹ್ಯೂಸ್ಟನ್‌ನ ಅಪಾರ್ಟ್‌ಮೆಂಟ್ ಒಂದರಲ್ಲಿ ಗಲಾಟೆ ನಡೆಯುತ್ತಿದೆ ಎಂಬ ದೂರಿನ ಆಧಾರದಲ್ಲಿ ಪೊಲೀಸರು ಸ್ಥಳಕ್ಕೆ ತೆರಳಿದಾಗ 51 ವರ್ಷದ ಹಿಸ್ಪಾನಿಕ್ ಜನಾಂಗೀಯ (ಮಧ್ಯ ಮತ್ತು ದಕ್ಷಿಣ ಅಮೆರಿಕದಲ್ಲಿರುವ ಸ್ಪಾನಿಶ್ ಭಾಷೆ ಮಾತನಾಡುವ ಜನಾಂಗೀಯರು) ಮನಬಂದಂತೆ ಗುಂಡು ಹಾರಿಸಿದನು. ಆಗ ಸಾರ್ಜಂಟ್ ಹೆರಾಲ್ಡ್ ಪ್ರೆಸ್ಟನ್ ಮೃತಪಟ್ಟರು ಮತ್ತು ಆಫೀಸರ್ ಕೋರ್ಟ್ನಿ ವಾಲರ್ ಗಾಯಗೊಂಡರು ಎಂದು ಅಸೆವೊಡೊ ತಿಳಿಸಿದರು.
Next Story