ಬಿಹಾರ ಚುನಾವಣಾ ಪ್ರಣಾಳಿಕೆಯಲ್ಲಿ ಉಚಿತ ಕೊರೋನ ಲಸಿಕೆ ಭರವಸೆ ನೀಡಿದ ಬಿಜೆಪಿ
ಪಾಟ್ನಾ: ಬಿಜೆಪಿ ನಾಯಕಿ ಹಾಗೂ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಗುರುವಾರ ಬಿಹಾರ ವಿಧಾನಸಭಾ ಚುನಾವಣೆಗೆ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದಾರೆ.
ಉಚಿತ ಕೊರೋನ ವೈರಸ್ ಲಸಿಕೆ ಹಾಗೂ 19 ಲಕ್ಷ ಉದ್ಯೋಗ ಸೃಷ್ಟಿಯು ಆಡಳಿತಾರೂಢ ಬಿಜೆಪಿಯ ಪ್ರಣಾಳಿಕೆಯಲ್ಲಿರುವ ಪ್ರಮುಖ ಭರವಸೆಗಳಾಗಿವೆ.
ಉತ್ತಮಗುಣಮಟ್ಟದ ಜೀವನ ಒದಗಿಸಲು ಬಿಜೆಪಿ ಕಾರ್ಯೋನ್ಮುಖವಾಗಿದೆ ಎಂದು ಒತ್ತಿ ಹೇಳಿದ ಸೀತಾರಾಮನ್, ಎಲ್ಲ ನಾಗರಿಕರು ರಾಜಕೀಯ ಪ್ರಜ್ಞೆ ಹಾಗೂ ಉತ್ತಮ ಮಾಹಿತಿ ಹೊಂದಿರುವ ರಾಜ್ಯಗಳ ಪೈಕಿ ಬಿಹಾರವೂ ಒಂದು. ಅವರು ರಾಜಕೀಯ ಪಕ್ಷಗಳು ಮಾಡುವ ಭರವಸೆಗಳನ್ನು ಅರ್ಥಮಾಡಿಕೊಳ್ಳುತ್ತಾರೆ. ಯಾರಾದರೂ ನಮ್ಮ ಪ್ರಣಾಳಿಕೆಯ ಬಗ್ಗೆ ಪ್ರಶ್ನೆ ಎತ್ತಿದರೆ ಅವರಿಗೆ ನಾವು ಆತ್ಮವಿಶ್ವಾಸದಿಂದ ಉತ್ತರ ನೀಡುತ್ತೇವೆ.ನಾವು ಕೊಟ್ಟ ಭರವಸೆಯನ್ನು ಈಡೇರಿಸುತ್ತೇವೆ ಎಂದರು.
Next Story