ಮದುವೆಯಾಗಿಲ್ಲ ಎಂದು ಆತ್ಮಹತ್ಯೆಗೆ ಶರಣಾದ ಯುವಕ

ಮೈಸೂರು,ಅ.23: ಮನೆಯವರು ತನಗೆ ಮದುವೆ ಮಾಡುತ್ತಿಲ್ಲ ಎಂಬ ಕಾರಣಕ್ಕೆ 22 ವರ್ಷದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ನಗರದ ಮಂಡಿ ಮೊಹಲ್ಲಾ ಠಾಣಾ ವ್ಯಾಪ್ತಿಯ ಎರೆಕಟ್ಟೆ ಸ್ಟ್ರೀಟ್ ನಿವಾಸಿ ಅಸ್ಲಾಂ ಪಾಷ್ ಎಂಬವರ ಪುತ್ರ ಮುಹಮ್ಮದ್ ಸಲ್ಮಾನ್ (22) ಎಂಬಾತನೇ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಯುವಕ.
ತನಗೆ ಮದುವೆ ಮಾಡುವಂತೆ ಮುಹಮ್ಮದ್ ಸಲ್ಮಾನ್ ಹಲವು ಬಾರಿ ತನ್ನ ಪಾಲಕರಲ್ಲಿ ಒತ್ತಾಯಿಸಿದ್ದ. ಇವನ ಒತ್ತಾಯಕ್ಕೆ ಬೇಸತ್ತ ಪಾಲಕರು ಹುಡುಗಿಯನ್ನು ನೋಡಲು ಆರಂಭಿಸಿದ್ದರು. ಆದರೆ, ಈ ಮಧ್ಯೆ ಮನಸ್ಸು ಬದಲಾಯಿಸಿದ ಪಾಲಕರು ಸದ್ಯಕ್ಕೆ ಮದುವೆ ಬೇಡ ಇನ್ನೂ ವಯಸ್ಸು ಇದೆ. ಮೊದಲು ಮನೆ ಕಟ್ಟುವ ಆಮೇಲೆ ಮದುವೆ ಮಾಡುತ್ತೇವೆ ಎಂದು ಹೇಳಿದ್ದಾರೆ. ಇದೇ ಎಂಬ ಕಾರಣಕ್ಕೆ ಮನನೊಂದ ಮುಹಮ್ಮದ್ ಸಲ್ಮಾನ್ ರವಿವಾರ ಸಂಜೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ.
ಈ ಸಂಬಂಧ ಮಂಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





