ನಿವೃತ್ತ ಪೊಲೀಸರಿಗೆ ಗುರುತಿನ ಚೀಟಿ: ಡಿಜಿಪಿ ಪ್ರವೀಣ್ ಸೂದ್

ಬೆಂಗಳೂರು, ಅ.23: ಐಎಎಸ್, ಐಪಿಎಸ್ ಹಾಗೂ ಐಎಫ್‍ಎಸ್ ಅಧಿಕಾರಿಗಳಂತೆಯೇ ನಿವೃತ್ತಿ ಹೊಂದಿದ ಪೊಲೀಸ್ ಸಿಬ್ಬಂದಿಗೂ ಗುರುತಿನ ಚೀಟಿ ನೀಡಲು ರಾಜ್ಯ ಪೊಲೀಸ್ ಮಹಾನಿರ್ದೇಶಕ(ಡಿಜಿಪಿ) ಪ್ರವೀಣ್ ಸೂದ್ ಅವರು ಸುತ್ತೋಲೆಯನ್ನು ಹೊರಡಿಸಿದ್ದಾರೆ.
ಸುತ್ತೋಲೆಯಲ್ಲಿ ಪೊಲೀಸ್ ಪೇದೆಯಿಂದ ಎಸ್ಪಿವರೆಗೂ ನಿವೃತ್ತಿ ಹೊಂದಿದ ಎಲ್ಲ ಪೊಲೀಸರಿಗೂ ಗುರುತಿನ ಚೀಟಿ (ಐಡಿ ಕಾರ್ಡ್) ನೀಡುವಂತೆ ಸೂಚಿಸಲಾಗಿದೆ.
ಈ ಗುರುತಿನ ಚೀಟಿಯು ನಿವೃತ್ತಿ ಹೊಂದಿದ ಪೊಲೀಸರು ಸರಕಾರಿ ಕಚೇರಿಗಳಿಗೆ ಭೇಟಿ ನೀಡಿದಾಗ ಅಥವಾ ಪ್ರಯಾಣದ ಸಂದರ್ಭಗಳಲ್ಲಿ, ಪೊಲೀಸ್ ಕ್ಯಾಂಟೀನ್‍ಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಹಾಯ ಮಾಡುತ್ತದೆ.
ಈ ಗುರುತಿನ ಚೀಟಿಯಲ್ಲಿ ನಿವೃತ್ತಿ ಹೊಂದಿದ ಸಿಬ್ಬಂದಿಯ ಹೆಸರು, ನಿವೃತ್ತಿಯ ಸಮಯದಲ್ಲಿ ಪಡೆದಿರುವ ಶ್ರೇಣಿ, ರಕ್ತದ ಗುಂಪು ಮತ್ತು ನಿವೃತ್ತಿಯ ದಿನಾಂಕ ಮುಂತಾದ ವಿವರಗಳನ್ನು ನಮೂದಿಸುವಂತೆ ಸೂಚಿಸಲಾಗಿದೆ.
Next Story





