ಅಫ್ಘಾನ್: ರಸ್ತೆ ಬದಿ ಬಾಂಬ್ ಸಿಡಿದು 9 ಬಸ್ ಪ್ರಯಾಣಿಕರು ಸಾವು

ಕಾಬೂಲ್ (ಅಫ್ಘಾನಿಸ್ತಾನ), ಅ. 24: ಅಫ್ಘಾನಿಸ್ತಾನ ರಾಜಧಾನಿ ಕಾಬೂಲ್‌ನಲ್ಲಿ ಶನಿವಾರ ಬೆಳಗ್ಗೆ ಬಸ್ಸೊಂದು ಸಾಗುತ್ತಿದ್ದಾಗ ರಸ್ತೆ ಬದಿಯಲ್ಲಿ ಇಡಲಾಗಿದ್ದ ಬಾಂಬೊಂದು ಸ್ಫೋಟಿಸಿ ಬಸ್ಸಿನಲ್ಲಿದ್ದ ಒಂಬತ್ತು ಪ್ರಯಾಣಿಕರು ಮೃತಪಟ್ಟಿದ್ದಾರೆ. ಮೃತರಲ್ಲಿ ಮೂವರು ಮಹಿಳೆಯರೂ ಸೇರಿದ್ದಾರೆ.
ಬಸ್ಸು ಕಾಬೂಲ್‌ನಿಂದ ಪೂರ್ವದ ನಗರ ಘಝ್ನಿಗೆ ಹೋಗುತ್ತಿತ್ತು ಎಂದು ಘಝ್ನಿ ಪ್ರಾಂತದ ಗವರ್ನರ್‌ರ ವಕ್ತಾರರೊಬ್ಬರು ಎಎಫ್‌ಪಿ ಸುದ್ದಿ ಸಂಸ್ಥೆಗೆ ತಿಳಿಸಿದರು.
ಸ್ಫೋಟದಲ್ಲಿ ನಾಲ್ವರು ಪೊಲೀಸರು ಗಾಯಗೊಂಡಿದ್ದಾರೆ. ಸ್ಫೋಟಕ್ಕೆ ತಾಲಿಬಾನ್ ಭಯೋತ್ಪಾದಕ ಸಂಘಟನೆ ಕಾರಣ ಎಂದು ಪೊಲೀಸರು ಆರೋಪಿಸಿದ್ದಾರೆ. ಆದರೆ, ಈ ಬಗ್ಗೆ ತಾಲಿಬಾನ್ ಯಾವುದೇ ಹೇಳಿಕೆ ನೀಡಿಲ್ಲ.
Next Story