ಪಿಲಿಂಗುಳಿ: ದಾಮು ನಾಯ್ಕ ಪಿ.ರಿಗೆ ಸನ್ಮಾನ
ಬಂಟ್ವಾಳ, ಅ. 26: ಜೀವನದಲ್ಲಿ ತ್ಯಾಗ ಮತ್ತು ಸಹನೆಯ ಗುಣವಿರುವ ವ್ಯಕ್ತಿಗಳು ಬದುಕಿನ ಯಾವುದೇ ಸಂಕಷ್ಟಗಳನ್ನು ಯಶಸ್ವಿಯಾಗಿ ಎದುರಿಸಬಲ್ಲರು ಎಂದು ಉಪನ್ಯಾಸಕ ಬಾಲಕೃಷ್ಣ ನಾಯ್ಕ ಬೆಳ್ಳಾರೆ ನುಡಿದಿದ್ದಾರೆ.
ಕನ್ಯಾನ ಪಿಲಿಂಗುಳಿ ತರವಾಡು ಕುಟುಂಬದ ಮನೆಯಲ್ಲಿ ಇತ್ತೀಚೆಗೆ ನಡೆದ ಕುಟುಂಬ ಸಮ್ಮಿಲನ ಕಾರ್ಯಕ್ರಮದಲ್ಲಿ ಮಂಗಳೂರು ನಬಾರ್ಡ್ ಬ್ಯಾಂಕಿನಲ್ಲಿ ವಿಶೇಷ ವಾರ್ತಾ ವಾಹಕರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿರುವ ದಾಮು ನಾಯ್ಕ ಪಿ. ಅವರಿಗೆ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಕುಟುಂಬದ ಹಿರಿಯರಾದ ಚನಿಯಪ್ಪ ನಾಯ್ಕ ಕಣಿಯೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಶುಭ ಕೋರಿದರು. ಕಮಲ ಕೃಷ್ಣ ನಾಯ್ಕ ಸುಳ್ಯ, ನಾರಾಯಣ ನಾಯ್ಕ ಪಿಲಿಂಗುಳಿ ಮತ್ತು ಲಕ್ಷ್ಮಿ ದಾಮು ನಾಯ್ಕ ಕಾವೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸುಂದರಿ ಕಣಿಯೂರು, ಶಾಂತಪ್ಪ ನಾಯ್ಕ ವಾಮಂಜೂರು, ರಾಮ ನಾಯ್ಕ ಕುಂಟುಕುಡೇಲು, ಚನಿಯಪ್ಪ ನಾಯ್ಕ ಪಿಲಿಂಗುಳಿ, ಬಾಬು ನಾಯ್ಕ ಸುಳ್ಯ, ಬಾಲಚಂದ್ರ ನಾಯ್ಕ ಆಲಂಕಾರು, ಮಹೇಶ್ ಪಿಲಿಂಗುಳಿ, ಬೇಬಿ ವಾಮಂಜೂರು, ಮಹಾಬಲ ನಾಯ್ಕ ಕಣಿಯೂರು ಹಾಗೂ ಯತೀಶ ಮತ್ತು ಯಜ್ಞೇಶ ಕಾವೂರು ಸಹಕರಿಸಿದರು.
ಹರ್ಷಿತಾ ವಾಮಂಜೂರು ಸನ್ಮಾನ ಪತ್ರ ವಾಚಿಸಿದರು. ಸುಂದರ ನಾಯ್ಕ ಮೂಡಬಿದಿರೆ ಸ್ವಾಗತಿಸಿ, ಚಂದ್ರಾವತಿ ಪಿಲಿಂಗುಳಿ ವಂದಿಸಿದರು. ಕೊರಗಪ್ಪ ನಾಯ್ಕ ಬೆಳ್ಳಾರೆ ಕಾರ್ಯಕ್ರಮ ನಿರೂಪಿಸಿದರು.