ಯುವತಿ ನಾಪತ್ತೆ
![ಯುವತಿ ನಾಪತ್ತೆ ಯುವತಿ ನಾಪತ್ತೆ](https://www.varthabharati.in/sites/default/files/images/articles/2020/10/27/265022-1603812673.jpg)
ಉಡುಪಿ, ಅ.27: ಉಡುಪಿ ತಾಲೂಕು ಆತ್ರಾಡಿ ಗ್ರಾಮದ ನಿವಾಸಿ ನಿಶ್ಮಿತಾ (19) ಎಂಬವರು ಅ.22ರಿಂದ ನಾಪತ್ತೆಯಾಗಿದ್ದಾರೆ.
ಚಹರೆ: 152 ಸೆಂ.ಮಿ. ಎತ್ತರವಿದ್ದು, ಬಿಳಿ ಮೈಬಣ್ಣ, ಸಾಧಾರಣ ಶರೀರ, ದುಂಡು ಮುಖ ಹೊಂದಿದ್ದಾರೆ. ಕನ್ನಡ, ತುಳು ಭಾಷೆ ಬಲ್ಲವರಾಗಿದ್ದು, ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಹಿರಿಯಡ್ಕ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
Next Story