ವಿಟ್ಲ ಕೇಂದ್ರ ಜಮಾ ಮಸೀದಿಯಲ್ಲಿ ಮೀಲಾದುನ್ನಬಿ
ವಿಟ್ಲ : ವಿಶ್ವ ಪ್ರವಾದಿ ಮುಹಮ್ಮದ್ ಮುಸ್ತಫಾ (ಸ.ಅ) ರವರ ಜನ್ಮ ದಿನಾಚರಣೆಯು ವಿಟ್ಲ ಕೇಂದ್ರ ಜಮಾ ಮಸೀದಿಯಲ್ಲಿ ನಡೆಯಿತು.
ಮಸೀದಿಯ ಅಧ್ಯಕ್ಷ ಇಬ್ರಾಹಿಂ ಮೇಗಿನಪೇಟೆ ಧ್ವಜಾರೋಹಣ ಮಾಡಿದರು. ಖತೀಬ್ ಮುಹಮ್ಮದ್ ಅಲಿ ಫೈಝಿ ದುವಾ ನೆರವೇರಿಸಿ, ಪ್ರವಾದಿಯವರ ಮೇಲಿನ ಪ್ರೀತಿ ಕೇವಲ ಒಂದೇ ದಿನಕ್ಕೆ ಸೀಮಿತವಾಗದೆ ಜೀವನ ಪರ್ಯಂತ ಅಳವಡಿಕೊಂಡು ನೆಬಿಯವರ ತತ್ವಾದರ್ಶಗಳನ್ನು ಮೈಗೂಡಿಸುವಂತೆ ಸಂದೇಶ ನೀಡಿದರು.
ಉಪಾಧ್ಯಕ್ಷ ಇಸ್ಮಾಯಿಲ್ ಶಾಫಿ ,ಮಹಮ್ಮದ್ ಗಮಿ,ಕಾರ್ಯದರ್ಶಿ ಇಬ್ರಾಹಿಂ ಕೊಲ್ನಾಡ್,ಜತೆ ಕಾರ್ಯದರ್ಶಿ ಇಕ್ಬಾಲ್ ಶೀತಲ್, ಹೊರೈಝನ್ ಶಾಲೆಯ ಉಪಾಧ್ಯಕ್ಷ ಗಫೂರ್ ಮೇಗಿನಪೇಟೆ, ಅಬೂಬಕರ್ ಅನಿಲಕಟ್ಟೆ, ಶೆರೀಫ್ ಇಂಡಿಯನ್,ಇಸ್ಮಾಯಿಲ್ ಪರ್ತಿಪ್ಪಾಡಿ ಯೂಸೂಫ್ ಗಮಿ, ಅಝೀಝ್ ಸನಾ, ಸರ್ಫರಾಝ್,ರಫೀಕ್ ಪೊನ್ನೋಟು, ಹನೀಫ್ ದಾರಿಮಿ,ಹಕೀಂ ಅರ್ಷದಿ ಮುಂತಾದವರು ಉಪಸ್ಥಿತರಿದ್ದರು.
Next Story