Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಮನೆಯ ಬಾವಿಯನ್ನೇ ಅಕ್ವೇರಿಯಂ ಮಾಡಿಕೊಂಡ...

ಮನೆಯ ಬಾವಿಯನ್ನೇ ಅಕ್ವೇರಿಯಂ ಮಾಡಿಕೊಂಡ ಮತ್ಸ್ಯ ಪ್ರೇಮಿ !

200ಕ್ಕೂ ಅಧಿಕ ಮೀನುಗಳನ್ನು ಸಾಕುವ ಉದ್ಯಾವರದ ರಫೀಕ್ ಸಾಬ್ಜಾನ್

ವಾರ್ತಾಭಾರತಿವಾರ್ತಾಭಾರತಿ29 Oct 2020 7:39 PM IST
share
ಮನೆಯ ಬಾವಿಯನ್ನೇ ಅಕ್ವೇರಿಯಂ ಮಾಡಿಕೊಂಡ ಮತ್ಸ್ಯ  ಪ್ರೇಮಿ !

ಉಡುಪಿ, ಅ.29: ಎಲ್ಲರು ಮನೆಯೊಳಗೆ ಅಕ್ವೇರಿಯಮ್ ಇಟ್ಟುಕೊಂಡು ಬಣ್ಣಬಣ್ಣದ ಮೀನುಗಳನ್ನು ಪೋಷಿಸಿದರೆ, ಇಲ್ಲೊಬ್ಬರು ಮತ್ಸ್ಯ ಪ್ರೇಮಿ, ತನ್ನ ಮನೆಯ ಬಾವಿಯನ್ನೇ ಅಕ್ವೇರಿಯಂ ಮಾಡಿಕೊಂಡು ಹಲವು ಜಾತಿಯ ಬಣ್ಣ ಬಣ್ಣದ ಮೀನುಗಳನ್ನು ಸಾಕುತ್ತಿದ್ದಾರೆ.

ಉದ್ಯಾವರದ ಬೈಲುಜಿಡ್ಡೆ ನಿವಾಸಿ ಮಹಮ್ಮದ್ ರಫೀಕ್ ಸಾಬ್ಜಾನ್ (62) ಅಕ್ವೇರಿಯಂನಲ್ಲಿ ಮೀನುಗಳಿಗೆ ಹಿಂಸೆ ನೀಡುವುದನ್ನು ತಪ್ಪಿಸಲು ಈ ಹೊಸ ವಿಧಾನ ಕಂಡುಕೊಂಡಿದ್ದಾರೆ. ಇವರ ಮನೆಯ ಕುಡಿಯುವ ನೀರಿನ ಬಾವಿ ಇದೀಗ ವಿವಿಧ ಪ್ರಬೇಧಗಳ, ವರ್ಣ ವೈವಿಧ್ಯದ ಮೀನುಗಳಿಗೆ ಆಶ್ರಯ ಕಲ್ಪಿಸಿದೆ.

ಮಸ್ಕತ್‌ನಲ್ಲಿ ದುಡಿಯುತ್ತಿದ್ದ ಇವರು, ಕಳೆದ 10ವರ್ಷಗಳಿಂದ ಊರಿನಲ್ಲಿ ನಿವೃತ್ತಿ ಜೀವನ ನಡೆಸುತ್ತಿದ್ದಾರೆ. ಇವರು ಐದು ವರ್ಷಗಳ ಹಿಂದೆ ಮೊಮ್ಮಗಳು ಅಲಿನಾ ಮರಿಯಮ್ ಸಂತೋಷಕ್ಕಾಗಿ ಅಕ್ವೇರಿಯಂನ್ನು ಮನೆಗೆ ತಂದು ಇರಿಸಿ ಮೀನುಗಳನ್ನು ಸಾಕುತ್ತಿದ್ದರು. ಅಕ್ವೇರಿಯಂನಲ್ಲಿ ಸಣ್ಣ ಹಾಗೂ ಇಕ್ಕಾಟದ ಜಾಗ ಮತ್ತು ಪದೇ ಪದೇ ನೀರು ಬದಲಾಯಿಸುವ ಸಂದರ್ಭ ಮೀನು ಅನುಭವಿಸುವ ಹಿಂಸೆಯನ್ನು ಅರಿತ ರಫೀಕ್, ಮೊಮ್ಮಗಳ ಮನವೊಲಿಸಿ ಮನೆಯ ಬಾವಿಗೆ ಈ ಮೀನುಗಳನ್ನು ಹಾಕಿದರು.

ಹೀಗೆ ಈ ಮೀನುಗಳು ಸ್ವಚ್ಛಂದವಾಗಿ ಇರಲು ರಫೀಕ್ ತನ್ನ ಮನೆಯ ಬಾವಿ ಯನ್ನೇ ಬಳಸಿಕೊಂಡರು. ಕ್ರಮೇಣ ಮೀನುಗಳು ಬಾವಿಯ ವಾತಾವರಣಕ್ಕೆ ಹೊಂದಿಕೊಂಡು ಬೆಳೆಯಲು ಆರಂಭಿಸಿದವು. ಇದರಿಂದ ಇನ್ನಷ್ಟು ಆಸಕ್ತರಾದ ರಫೀಕ್, ಉಡುಪಿ, ಮದ್ರಾಸ್ ಸೇರಿದಂತೆ ಹಲವು ಕಡೆಗಳಿಂದ ಮೀನುಗಳನ್ನು ತರಿಸಿ ಬಾವಿಯಲ್ಲಿ ಸಾಕಿದರು. ಇದೀಗ ಮನೆಯ ಕುಡಿಯುವ ನೀರಿನ ಬಾವಿಯೇ ಅಕ್ವೇರಿಯಂ ಆಗಿ ಪರಿವರ್ತನೆಯಾಗಿದೆ.

70 ಜಾತಿಯ ಆಕರ್ಷಕ ಮೀನುಗಳು

ಬಾವಿಯನ್ನೇ ಆಶ್ರಯಿಸಿಕೊಂಡಿರುವ ವಿವಿಧ ಪ್ರಬೇಧದ ಮೀನುಗಳು, ಇದೀಗ ಮರಿ ಇಡಲು ಪ್ರಾರಂಭಿಸಿವೆ. ಹೀಗೆ 70 ಜಾತಿಯ 100ಕ್ಕೂ ಅಧಿಕ ಬೃಹತ್ ಗಾತ್ರದ ಮೀನುಗಳು ಮತ್ತು 150ಕ್ಕೂ ಅಧಿಕ ಮರಿ ಮೀನುಗಳು ಬಾವಿಯಲ್ಲಿ ಬದುಕುತ್ತಿವೆ.

ಬಾವಿಯಲ್ಲಿ ಸ್ವಚ್ಛಂದವಾಗಿ ವಿಹರಿಸುತ್ತಿರುವ ಕೋಯಿ ಫಿಶ್, ಕಾರ್ಪ್ ಫಿಶ್, ಗೋಲ್ಡ್ ಫಿಶ್, ಫ್ಯಾನ್ಸಿ ಶಾರ್ಕ್ ಮುಂತಾದ ಹಲವು ಜಾತಿಯ ಕೆಂಪು, ಕಿತ್ತಲೆ, ಕಪ್ಪು, ಗೋಲ್ಡನ್ ಬಣ್ಣದ ಮೀನುಗಳು ಕಣ್ಮನ ಸೆಳೆಯುತ್ತವೆ. ಸಣ್ಣ ಗಾತ್ರದಲ್ಲಿ ತಂದು ಹಾಕಿ ಮೀನುಗಳು ಇಂದು 4-6ಕೆ.ಜಿ.ವರೆಗೂ ಬೆಳೆದುಕೊಂಡಿವೆ.

‘35 ಅಡಿ ಅಗಲದ ಈ ಬಾವಿಯಲ್ಲಿ ಬೇಸಿಗೆಯಲ್ಲಿ 20 ಅಡಿಯವರೆಗೂ ನೀರು ಇರುತ್ತದೆ. ಈ ಮೀನುಗಳಿಗೆ ದಿನಕ್ಕೆ ಮೂರು ಬಾರಿ ಆಹಾರವನ್ನು ಹಾಕುತ್ತೇವೆ. ಮೀನುಗಳ ರೆಡಿಫುಡ್ ಜೊತೆ ಮನೆಯಲ್ಲಿ ತಯಾರಿಸಿದ ಚಪಾತಿ ತುಂಡುಗಳನ್ನು ಕೂಡ ಹಾಕುತ್ತೇವೆ.’ ಎನ್ನುತ್ತಾರೆ ಮತ್ಸ್ಯ ಪ್ರೇಮಿ ಮಹಮ್ಮದ್ ರಫೀಕ್ ಸಾಬ್ಜಾನ್.

ಇವರ ಮತ್ಸ್ಯ ಪ್ರೀತಿಗೆ ಪತ್ನಿ ನಸೀಮಾ ರಫಿಕ್, ಮೊಮ್ಮಕ್ಕಳಾದ ಆಯಿರಾ ಫಾತಿಮಾ, ಅಮೈರಾ ಆರೋಶ್, ಯಾಹಿನ್, ಮಹಮ್ಮದ್ ಶಯಾನ್, ಮಹಮ್ಮದ್ ನಿಹಾನ್, ಆಯಿಷಾ ಸಾದಿಕ್, ಮಹಿನ್, ನಿಹಾದ್ ಕೂಡ ಪ್ರೋತ್ಸಾಹ ನೀಡುತ್ತಿದ್ದಾರೆ.

ಯಜಮಾನನ ಚಪ್ಪಾಳೆಗೆ ಓಡಿ ಬರುವ ಮೀನುಗಳು !

ಕಳೆದ ಐದು ವರ್ಷಗಳಿಂದ ಆಹಾರ ನೀಡಿ ಪೋಷಿಸುತ್ತಿರುವ ಯಜಮಾನನ ಕೈಚಪ್ಪಾಳೆ ಹಾಗೂ ಧ್ವನಿಯನ್ನು ಮೀನುಗಳು ಆಲಿಸುತ್ತಿವೆ. ಅದಕ್ಕೆ ಸ್ಪಂದಿಸಿ ಎಷ್ಟೆ ಆಳದಲ್ಲಿದ್ದರೂ ಓಡೋಡಿ ಮೇಲೆ ಬರುತ್ತವೆ.

ಆಹಾರ ಹಾಕುವ ಸಂದರ್ಭದಲ್ಲಿ ರಫೀಕ್, ಚಪ್ಪಾಳೆ ತಟ್ಟಿ ಮೀನುಗಳನ್ನು ಕರೆಯುತ್ತಾರೆ. ಯಜಮಾನನ ಧ್ವನಿ ಕೇಳಿದ ತಕ್ಷಣವೇ ಎಲ್ಲ ಮೀನುಗಳು ನೀರಿನ ಮೇಲ್ಭಾಗದಲ್ಲಿ ಬಂದು ಸೇರುತ್ತವೆ. ಆಹಾರ ಹಾಕಲು ಸ್ವಲ್ಪ ತಡವಾದರೂ ವಿಚಿತ್ರ ಶಬ್ದಗಳನ್ನು ಮೀನುಗಳು ಹೊರಡಿಸುತ್ತವೆ. ಹೀಗೆ ಮೀನು ಮತ್ತು ರಫೀಕ್ ನಡುವೆ ಭಾವನಾತ್ಮಕ ನಂಟು ಇರುವುದು ಕಂಡುಬರುತ್ತದೆ.

''ಕಳೆದ ಐದು ವರ್ಷಗಳಿಂದ ಬಾವಿಯಲ್ಲಿಯೇ ಮೀನುಗಳನ್ನು ಸಾಕುತ್ತಿದ್ದೇವೆ. ಈಗ ನಮ್ಮ ಮನೆಯ ಸದಸ್ಯರೇ ಆಗಿರುವ ಇವುಗಳಿಗೆ ದಿನಕ್ಕೆ ಮೂರು ಬಾರಿ ಆಹಾರ ನೀಡುತ್ತೇವೆ. ಬೆಳಗ್ಗೆ 4 ಚಪಾತಿ ಹಾಗೂ ಸಂಜೆ ಎರಡು ಚಪಾತಿ ನೀಡುತ್ತೇವೆ. ನಾವು ಚಪ್ಪಾಳೆ ತಟ್ಟಿದರೆ ಮಾತ್ರ ಅವುಗಳು ಮೇಲ್ಭಾಗಕ್ಕೆ ಬರುತ್ತವೆ. ಈಗ ಮೀನುಗಳು ದೊಡ್ಡದಾಗಿ ಬೆಳೆದು ಮರಿ ಇಡುತ್ತಿವೆ. ಇದರಿಂದ ಬಾವಿಯಲ್ಲಿ ಮೀನುಗಳ ಸಂಖ್ಯೆ ಕೂಡ ಹೆಚ್ಚುತ್ತಿವೆ''.

-ಮಹಮ್ಮದ್ ರಫೀಕ್ ಸಾಬ್ಜಾನ್

share
ವಾರ್ತಾಭಾರತಿ
ವಾರ್ತಾಭಾರತಿ
Next Story
X