ದ.ಕ. ಜಿಲ್ಲೆ : 30 ಸಾವಿರ ಗಡಿ ದಾಟಿದ ಸೋಂಕಿತರು; ಕೋವಿಡ್ ಗೆ ಇಬ್ಬರು ಬಲಿ
ಮಂಗಳೂರು, ಅ.29: ದ.ಕ. ಜಿಲ್ಲೆಯಲ್ಲಿ ಕೊರೋನ ಸೋಂಕು ತಗುಲಿದವರ ಸಂಖ್ಯೆ ಗುರುವಾರ ಬರೋಬ್ಬರಿ 30 ಸಾವಿರದ ಗಡಿ ದಾಡಿದೆ. ಈ ನಡುವೆ ಕೋವಿಡ್ಗೆ ಮತ್ತೆ ಇಬ್ಬರು ಮೃತಪಟ್ಟಿದ್ದಾರೆ.
ಗುರುವಾರ ಹೊಸದಾಗಿ 96 ಮಂದಿಗೆ ಸೋಂಕು ತಗುಲಿದ್ದು, 424 ಮಂದಿ ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಕೋವಿಡ್ನಿಂದ ಮೃತಪಟ್ಟವರ ಸಂಖ್ಯೆ 673ಕ್ಕೆ ಏರಿಕೆಯಾಗಿದೆ.
ಜಿಲ್ಲೆಯಲ್ಲಿನ 30,010 ಸೋಂಕಿತರ ಪೈಕಿ 27,443 ಮಂದಿ ಕೊರೋನದಿಂದ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಜಿಲ್ಲೆಯಲ್ಲಿ 1,894 ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ತಿಳಿಸಿದ್ದಾರೆ.
Next Story