ಮುಂಬೈ: ರಸ್ತೆ ಮೇಲೆಲ್ಲಾ ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರೋನ್ ಪೋಸ್ಟರ್ ಗಳು; ವೀಡಿಯೋ ವೈರಲ್
ಪೋಸ್ಟರ್ ಗಳನ್ನು ತೆರವುಗೊಳಿಸಲು ಆದೇಶಿಸಿದ ಪೊಲೀಸರು

ಮುಂಬೈ: ಪ್ರವಾದಿ ಮುಹಮ್ಮದ್ ಅವರ ಕುರಿತಾದ ವ್ಯಂಗ್ಯ ಚಿತ್ರಗಳನ್ನು ತೋರಿಸುವ ಹಕ್ಕನ್ನು ಸಮರ್ಥಿಸಿ ಫ್ರಾನ್ಸ್ ಅಧ್ಯಕ್ಷ ಇಮಾನ್ಯುವೆಲ್ ಮ್ಯಾಕ್ರೋನ್ ನೀಡಿದ್ದ ವಿವಾದಾತ್ಮಕ ಹೇಳಿಕೆಗಳನ್ನು ವಿರೋಧಿಸಿ ಮುಂಬೈನ ಭಿಂಡಿ ಬಜಾರ್ ಪ್ರದೇಶದ ಜೆಜೆ ಫ್ಲೈಓವರ್ ಅಡಿಯಲ್ಲಿರುವ ಮುಹಮ್ಮದ್ ಆಲಿ ರಸ್ತೆಯ ತುಂಬೆಲ್ಲಾ ಕಾಣಿಸಿಕೊಂಡ ಮ್ಯಾಕ್ರೋನ್ ಅವರ ನೂರಾರು ಪೋಸ್ಟರ್‍ಗಳನ್ನು ತೆರವುಗೊಳಿಸಲು ಪೊಲೀಸರು ಆದೇಶಿಸಿದ್ದಾರೆ.
ರಸ್ತೆಯಲ್ಲಿ ಅಂಟಿಸಲಾದ ಮ್ಯಾಕ್ರಾನ್ ಪೋಸ್ಟರ್‍ಗಳ ಚಿತ್ರ ಸಾಮಾಜಿಕ ಜಾಲತಾಣಗಳಲ್ಲೂ ವೈರಲ್ ಆಗಿದೆ. ಎಲ್ಲಾ ಪೋಸ್ಟರ್‍ಗಳನ್ನು ಅಲ್ಲಿಂದ ತೆರವುಗೊಳಿಸಲಾಗಿದೆ ಎಂದು ಮುಂಬೈ ಪೊಲೀಸರ ವಕ್ತಾರ ಎಸ್ ಚೈತನ್ಯ ಹೇಳಿದ್ದಾರೆ.
ವೈರಲ್ ಆಗಿರುವ ವೀಡಿಯೋದಲ್ಲಿ ಮ್ಯಾಕ್ರೋನ್ ಆವರ ಪೋಸ್ಟರ್‍ಗಳ ಮೇಲೆಯೇ ವಾಹನಗಳು ಹಾಗೂ ಪಾದಚಾರಿಗಳು ಸಾಗುತ್ತಿರುವುದು ಕಾಣಿಸುತ್ತದೆ.
UNIQUE PROTEST: France's President Macron Images/Pictures glued to the streets in Bhindi or Bhendi Bazaar in Mumbai, #India.#France #Nice #NiceAttack pic.twitter.com/AdtPAIW12U
— Insider Paper (@TheInsiderPaper) October 29, 2020







