ಶತಕ ವಂಚಿತ ಕ್ರಿಸ್ ಗೇಲ್: ಪಂಜಾಬ್ ವಿರುದ್ಧ ಗೆಲುವಿಗೆ ರಾಜಸ್ಥಾನಕ್ಕೆ 186 ರನ್ ಗುರಿ

ಅಬುಧಾಬಿ: ಕ್ರಿಸ್ ಗೇಲ್ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವು ರಾಜಸ್ಥಾನ ರಾಯಲ್ಸ್ ವಿರುದ್ಧ ಉತ್ತಮ ಮೊತ್ತ ದಾಖಲಿಸಿದ್ದು, ರಾಜಸ್ಥಾನ ಗೆಲುವಿಗೆ 186 ರನ್ ಗುರಿ ನೀಡಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕಿಂಗ್ಸ್ ಇಲೆವೆನ್ ಪಂಜಾಬ್ ನಿಗದಿತ 20 ಓವರ್ ಗಳಲ್ಲಿ 185-4 ರನ್ ಗಳಿಸಿತು.
ಆರಂಭಿಕ ಆಟಗಾರ ಕೆ.ಎಲ್ ರಾಹುಲ್ 46 (41 ಎಸೆತ) ಕ್ರಿಸ್ ಗೇಲ್ 99 (63 ಎಸೆತ) ನಿಕೋಲಸ್ ಪೂರನ್ 22 (10 ಎಸೆತ) ರನ್ ಬಾರಿಸಿದರು.
ರಾಜಸ್ಥಾನ ಪರ ಜೋಫ್ರಾ ಅರ್ಚರ್ ಹಾಗೂ ಸ್ಟೋಕ್ಸ್ ತಲಾ 2 ವಿಕೆಟ್ ಪಡೆದರು.
Next Story





