ಶರಣ ಪರಂಪರೆಯಲ್ಲೇ ಮೊದಲ ಬಾರಿಗೆ ಹೆಣ್ಣು ಮಗುವಿಗೆ ಲಿಂಗದೀಕ್ಷೆ
ಬಳ್ಳಾರಿ, ಅ.30: ಬಳ್ಳಾರಿ ತಾಲೂಕಿನ ಬೇವಿನಹಳ್ಳಿ ಗ್ರಾಮದಲ್ಲಿ ಭಕ್ತಗಣ ಮೊದಲ ಬಾರಿಗೆ ಶರಣ ಪರಂಪರೆಯಲ್ಲೇ ಹೆಣ್ಣು ಮಗುವಿಗೆ ಲಿಂಗದೀಕ್ಷೆ ಕೊಡಿಸುವ ಮೂಲಕ ಹೊಸ ಮುನ್ನುಡಿ ಬರೆದಿದ್ದಾರೆ.
ಬೇವಿನಹಳ್ಳಿ ಗ್ರಾಮದ ಕಡೇಮನೆ ವೀರಭದ್ರಗೌಡ ಅವರ ದ್ವಿತೀಯ ಪುತ್ರಿ ಕೆ.ಲತಾ ಅವರಿಗೆ ಜನಿಸಿದ ಹೆಣ್ಣು ಮಗುವಿಗೆ ಶರಣ ಪರಂಪರೆಯಲ್ಲೇ ಮೊದಲ ಬಾರಿಗೆ ಲಿಂಗದೀಕ್ಷೆ ನೀಡಿ ದೀಕ್ಷಾ ಎಂದು ಹೆಸರಿಟ್ಟಿದ್ದಾರೆ.
ಬಳ್ಳಾರಿಯ ರಾಷ್ಟ್ರೀಯ ಬಸವದಳದ ಮುಖ್ಯಸ್ಥ ರವಿಶಂಕರ್ ಅವರ ಸಮ್ಮುಖದಲ್ಲಿ ಲಿಂಗದೀಕ್ಷೆ ನೀಡಲಾಗಿದೆ. ಬಸವಾದಿ ಶರಣರ ವಚನಗಳ ಪಠಣ, ಲಿಂಗಪೂಜಾ ವಿಧಿ ವಿಧಾನದ ಮಹತ್ವದ ಕುರಿತು ತಿಳಿಸಿಕೊಡುವ ಮೂಲಕ 26 ದಿನಗಳ ಮಗುವಿಗೆ ಲಿಂಗಧಾರಣೆ ಮಾಡಿಸಿದ್ದಾರೆ.
ಯಾವುದೇ ವೈದ್ಧಿಕ ಮಂತ್ರ ಪಠಣೆಗೆ ಆಸ್ಪದ ನೀಡದೆ, ಶರಣರ ವಚನಗಳನ್ನ ಪಠಿಸುತ್ತಲೇ ಲಿಂಗಧಾರಣೆ ಸೇರಿ ಬಸವಣ್ಣನವರ ಭಾವಚಿತ್ರಕ್ಕೆ ನಮನ ಸಲ್ಲಿಸುವ ಮೂಲಕ ರಾಷ್ಟ್ರೀಯ ಬಸವ ದಳದ ಪ್ರಮುಖರು ಅತ್ಯಂತ ಸರಳವಾಗಿ ಈ ತೊಟ್ಟಿಲು ಕಾರ್ಯಕ್ರಮವನ್ನು ನೆರವೇರಿಸಿದ್ದಾರೆ.
Next Story





