ಅಪ್ರಾಪ್ತೆಯ ಅಪಹರಣ: ದೂರು
ಹಿರಿಯಡ್ಕ, ಅ.30: ಅಪ್ರಾಪ್ತ ವಯಸ್ಸಿನ ಯುವತಿಯೊಬ್ಬಳನ್ನು ಅಪರಿಚಿತ ವ್ಯಕ್ತಿ ಅಪಹರಿಸಿರುವ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳ್ಳಂಪಳ್ಳಿ ಪುಣುಚೂರು ನಿವಾಸಿ ಮೇಘಾ (17) ಎಂಬವರನ್ನು ಅ.28 ರಂದು ಮಧ್ಯಾಹ್ನ ವೇಳೆ ಬೆಳ್ಳಂಪಳ್ಳಿ ಪೇಟೆಯಿಂದ ಪುಸಲಾಯಿಸಿ ಕರೆದುಕೊಂಡು ಹೋಗಿರಬಹುದು ಅಥವಾ ಅಪಹರಿಸಿರಬಹುದು ಎಂದು ಮೇಘಾ ಅವರ ತಾಯಿ ಜ್ಯೋತಿ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಹಿರಿಯಡ್ಕ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Next Story





