ಮಾದಕ ದ್ರವ್ಯ ಸಾಗಾಟಗಾರನ ಬ್ಯಾಂಕ್ ಖಾತೆಗೆ ಬಿನೀಶ್ ಕೋಡಿಯೇರಿ ಹಣ ಜಮೆ: ಈ.ಡಿ.

ಫೈಲ್ ಚಿತ್ರ
ಹೊಸದಿಲ್ಲಿ, ಅ. 30: ಕೇರಳದ ಸಿಪಿಎಂ ನಾಯಕ ಕೋಡಿಯೇರಿ ಬಾಲಕೃಷ್ಣನ್ ಅವರ ಪುತ್ರ ಕೋಡಿಯೇರಿ ಬಿನೀಶ್ ಮಾದಕ ದ್ರವ್ಯ ಸಾಗಾಟಗಾರನ ಬ್ಯಾಂಕ್ ಖಾತೆಗೆ ದೊಡ್ಡ ಮೊತ್ತದ ಲೆಕ್ಕಾಚಾರ ರಹಿತ ಹಣವನ್ನು ಜಮೆ ಮಾಡಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಶುಕ್ರವಾರ ಹೇಳಿದೆ.
ಹಣ ಅಕ್ರಮ ವರ್ಗಾವಣೆ ಆರೋಪದಲ್ಲಿ ಬಿನೀಶ್ ಕೋಡಿಯೇರಿ ಅವರನ್ನು ಜಾರಿ ನಿರ್ದೇಶನಾಲಯ ಬೆಂಗಳೂರಿನಲ್ಲಿ ಗುರುವಾರ ಬಂಧಿಸಿತ್ತು. ಅನಂತರ ಸ್ಥಳೀಯ ನ್ಯಾಯಾಲಯದ ಮುಂದೆ ಹಾಜರುಪಡಿಸಿತ್ತು. ನ್ಯಾಯಾಲಯ ಬಿನೀಶ್ನನ್ನು ನವೆಂಬರ್ 2ರ ವರೆಗೆ ಜಾರಿ ನಿರ್ದೇಶನಾಲಯದ ಕಸ್ಟಡಿಗೆ ನೀಡಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿ ಮುಹಮ್ಮದ್ ಅನೂಪ್ನನ್ನು ಕೂಡ ಜಾರಿ ನಿರ್ದೇಶನಾಲಯ ಅಕ್ಯೋಬರ್ 17ರಂದು ಬಂಧಿಸಿತ್ತು.
Next Story





