Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಆರೋಗ್ಯ
  4. ದೇಶಿತುಪ್ಪದ ಕುರಿತ ನಾಲ್ಕು ಮಿಥ್ಯೆಗಳು...

ದೇಶಿತುಪ್ಪದ ಕುರಿತ ನಾಲ್ಕು ಮಿಥ್ಯೆಗಳು ಇಲ್ಲಿವೆ

ವಾರ್ತಾಭಾರತಿವಾರ್ತಾಭಾರತಿ30 Oct 2020 11:41 PM IST
share

 ಹಳ್ಳಿಗಳಲ್ಲಿ ತಯಾರಾಗುವ ಆಕಳ ತುಪ್ಪವನ್ನು ಕೋಟ್ಯಂತರ ಜನರು ಶತಮಾನಗಳಿಂದಲೂ ಸೇವಿಸುತ್ತಲೇ ಬಂದಿದ್ದಾರೆ. ಶುದ್ಧ ಹಳ್ಳಿತುಪ್ಪ ಅಥವಾ ದೇಶಿತುಪ್ಪವು ಹಲವಾರು ಆರೋಗ್ಯ ಲಾಭಗಳನ್ನು ನೀಡುತ್ತದೆ. ಭಾರತೀಯ ಉಪಖಂಡದಲ್ಲಿ ವಿವಿಧ ಅಡಿಗೆಗಳಲ್ಲಿ ದೇಶಿತುಪ್ಪವನ್ನು ಬಳಸಲಾಗುತ್ತದೆ. ಕೊಬ್ಬು,ಪ್ರೋಟಿನ್,ಪೊಟ್ಯಾಷಿಯಂ,ಖನಿಜಗಳಂತಹ ಹಲವಾರು ಪೋಷಕಾಂಶಗಳನ್ನು ಒಳಗೊಂಡಿರುವ ಈ ತುಪ್ಪವು ಶರೀರಕ್ಕೆ ಹೆಚ್ಚಿನ ಶಕ್ತಿಯನ್ನು ನೀಡುತ್ತದೆ. ಅಡಿಗೆಗೆ ಎಣ್ಣೆಯ ಬದಲು ತುಪ್ಪವನ್ನು ಬಳಸಿದರೆ ಹೆಚ್ಚು ಸ್ವಾದಿಷ್ಟವಾಗಿರುತ್ತದೆ. ತುಪ್ಪವು ಜೀರ್ಣಾಂಗ ವ್ಯವಸ್ಥೆ ಮತ್ತು ರೋಗನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ. ಮೂಳೆಗಳನ್ನು ಸದೃಢಗೊಳಿಸುವಲ್ಲಿಯೂ ಅದು ಪ್ರಮುಖ ಪಾತ್ರವನ್ನು ಹೊಂದಿದೆ. ಬೆಳೆಯುತ್ತಿರುವ ಮಕ್ಕಳ ಶರೀರಕ್ಕೆ ಹೆಚ್ಚಿನ ಬಲ ಮತ್ತು ಶಕ್ತಿಯು ಅಗತ್ಯವಾಗಿರುವುದರಿಂದ ದೇಶಿತುಪ್ಪವು ಅವರಿಗೆ ವಿಶೇಷ ಲಾಭಗಳನ್ನು ನೀಡುತ್ತದೆ. ಅದು ಕೊಬ್ಬು ಮತ್ತು ವಿಟಾಮಿನ್‌ಗಳ ಅತ್ಯುತ್ತಮ ಮೂಲವಾಗಿದ್ದು,ಇವು ಶರೀರದ ಬೆಳವಣಿಗೆಗೆ ನೆರವಾಗುತ್ತವೆ. ಇಂತಹ ದೇಶಿತುಪ್ಪದ ಕುರಿತ ಮಿಥ್ಯೆಗಳು ಮತ್ತು ಅವುಗಳ ಹಿಂದಿನ ಸತ್ಯಗಳು ಇಲ್ಲಿವೆ.....

ದೇಶಿತುಪ್ಪ ಆರೋಗ್ಯಕ್ಕೆ ಹಾನಿಕರ

 ಶರೀರದ ಒಟ್ಟಾರೆ ಆರೋಗ್ಯಕ್ಕೆ ದೇಶಿತುಪ್ಪ ಹಾನಿಕರ ಎಂಬ ಭಾವನೆ ಕೆಲವರಲ್ಲಿದೆ. ಆದರೆ ಅದು ಖಂಡಿತವಾಗಿಯೂ ಆರೋಗ್ಯಕ್ಕೆ ಹಾನಿಕರವಲ್ಲ. ಅದನ್ನು ಆಹಾರದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಬಳಸಬೇಕು. ತುಪ್ಪದಲ್ಲಿ ಮೊನೊಅನ್‌ಸ್ಯಾಚ್ಯುರೇಟೆಡ್ ಫ್ಯಾಟಿ ಆ್ಯಸಿಡ್‌ಗಳಿವೆ. ಇವು ಆರೋಗ್ಯಕರವಾಗಿದ್ದು,ಶರೀರಕ್ಕೆ ಹಾನಿಯನ್ನುಂಟು ಮಾಡುವುದಿಲ್ಲ. ಕ್ಯಾನ್ಸರ್ ಬೆಳವಣಿಗೆಯನ್ನು ತಗ್ಗಿಸುವ ಗುಣಗಳೂ ದೇಶಿತುಪ್ಪದಲ್ಲಿವೆ ಎಂದು ಹೇಳಲಾಗಿದೆ.

ಹೃದಯದ ಸಮಸ್ಯೆಗಳಿಗೆ ಕಾರಣವಾಗುತ್ತದೆ

ದೇಶಿತುಪ್ಪದ ಸೇವನೆಯಿಂದ ಹೃದಯಾಘಾತ ಮತ್ತು ಪಾರ್ಶ್ವವಾಯುವಿಗೆ ತುತ್ತಾಗುವ ಅಪಾಯ ಹೆಚ್ಚುತ್ತದೆ ಎನ್ನುವುದು ಇನ್ನೊಂದು ಮಿಥ್ಯೆಯಾಗಿದೆ. ಹೃದಯ ಸಮಸ್ಯೆಗಳುಂಟಾಗಲು ಹಲವಾರು ಕಾರಣಗಳಿವೆ,ಆದರೆ ದೇಶಿತುಪ್ಪವು ಇವುಗಳಲ್ಲಿ ಸೇರಿಲ್ಲ. ಪ್ರತಿದಿನ ಸೂಕ್ತ ದೈಹಿಕ ಚಟುವಟಿಕೆಗಳೊಂದಿಗೆ ಸರಿಯಾದ ಪ್ರಮಾಣದಲ್ಲಿ ತುಪ್ಪವನ್ನು ಸೇವಿಸುವುದು ಒಳ್ಳೆಯದು. ದೇಶಿತುಪ್ಪ್ಪದಲ್ಲಿ ಉತ್ಕರ್ಷಣ ನಿರೋಧಕಗಳು,ಸಂಯೋಜಿತ ಲಿನೊಲಿಕ್ ಆ್ಯಸಿಡ್ ಮತ್ತು ವಿಟಾಮಿನ್ ಎ,ಇ ಮತ್ತು ಡಿ ಇರುವುದರಿಂದ ಹೃದ್ರೋಗಗಳಿಗೆ ಅದು ಉತ್ತಮವಾಗಿದೆ.

ಲ್ಯಾಕ್ಟೋಸ್ ಅಸಹಿಷ್ಣುತೆ ಇರುವವರು ತುಪ್ಪ ಸೇವಿಸಬಾರದು

ಲ್ಯಾಕ್ಟೋಸ್ ಅಥವಾ ಹೈನು ಉತ್ಪನ್ನಗಳಿಗೆ ಅಸಹಿಷ್ಣುತೆ ಇರುವವರು ದೇಶಿತುಪ್ಪವನ್ನು ಸೇವಿಸಬಾರದು ಎನ್ನುವುದು ಇನ್ನೊಂದು ಮಿಥ್ಯೆಯಾಗಿದೆ. ಇಂತಹವರು ತುಪ್ಪವನ್ನು ಸೇವಿಸುವುದರಿಂದ ಸ್ಥಿತಿಯು ಇನ್ನಷ್ಟು ಹದಗೆಡುತ್ತದೆ ಎನ್ನುವ ಭಾವನೆ ಜನರಲ್ಲಿದೆ. ಆದರೆ ಇದು ನಿಜವಲ್ಲ, ಆಕಳ ತುಪ್ಪವು ಲ್ಯಾಕ್ಟೋಸ್ ಅಸಹಿಷ್ಣುತೆ ಇರುವವರಿಗೆ ಮತ್ತು ಇಲ್ಲದವರಿಗೂ ಅತ್ಯಂತ ಲಾಭದಾಯಕವಾಗಿದೆ.

ಶರೀರದ ತೂಕವನ್ನು ಹೆಚ್ಚಿಸುತ್ತದೆ

ದೇಶಿತುಪ್ಪವು ಶರೀರದ ತೂಕವನ್ನು ಹೆಚ್ಚಿಸುತ್ತದೆ ಎನ್ನುವುದು ಸಾಮಾನ್ಯ ನಂಬಿಕೆಯಾಗಿದೆ. ಶುದ್ಧ ದೇಶಿತುಪ್ಪವನ್ನು ಆಕಳ ಹಾಲಿನಿಂದ ತಯಾರಿಸುವುದರಿಂದ ಅದರಲ್ಲಿ ಕೊಬ್ಬು ಹೆಚ್ಚಿನ ಪ್ರಮಾಣದಲ್ಲಿರುತ್ತದೆ ಎಂದು ಕೆಲವರು ಗ್ರಹಿಸಿರುತ್ತಾರೆ. ಆದರೆ ಇದು ನಿಜವಲ್ಲ. ತುಪ್ಪದಲ್ಲಿರುವ ಸಂಯೋಜಿತ ಲಿನೊಲಿಕ್ ಆ್ಯಸಿಡ್ ತೂಕವನ್ನು ಕಡಿಮೆ ಮಾಡಲು ನೆರವಾಗುತ್ತದೆಯೇ ವಿನಃ ತೂಕವನ್ನು ಹೆಚ್ಚಿಸುವುದಿಲ್ಲ. ಆರೋಗ್ಯವನ್ನು ಕಾಯ್ದುಕೊಳ್ಳಲು ನೀವು ನಿಮ್ಮ ಆಹಾರದಲ್ಲಿ ಖಂಡಿತವಾಗಿಯೂ ತುಪ್ಪವನ್ನು ಸೇರಿಸಿಕೊಳ್ಳಬಹುದು.

 ಇವು ದೇಶಿತುಪ್ಪ ಕುರಿತ ನಾಲ್ಕು ಮಿಥ್ಯೆಗಳು ಮತ್ತು ಅವುಗಳ ಹಿಂದಿನ ಸತ್ಯಗಳಾಗಿವೆ. ಅದು ನಿಮ್ಮ ಆರೋಗ್ಯಕ್ಕೆ ಹಾನಿಯನ್ನುಂಟು ಮಾಡುವ ಬದಲು ನಿಜಕ್ಕೂ ವರದಾನವಾಗಿದೆ. ದೇಶಿತುಪ್ಪವು ನಿಮ್ಮ ಕಣ್ಣುಗಳ ದೃಷ್ಟಿಯನ್ನು ಹೆಚ್ಚಿಸುತ್ತದೆ ಮತ್ತು ಸ್ನಾಯುಗಳನ್ನು ಬಲಗೊಳಿಸುತ್ತದೆ. ಬೆಣ್ಣೆ ಅಥವಾ ರಿಫೈನ್ಡ್ ಆಯಿಲ್‌ಗೆ ಹೋಲಿಸಿದರೆ ದೇಶಿತುಪ್ಪವು ಕೊಲೆಸ್ಟ್ರಾಲ್ ಸಮಸ್ಯೆಯಿರುವವರಿಗೆ ಹೆಚ್ಚು ಒಳ್ಳೆಯದು. ಇದರಲ್ಲಿ ಕಡಿಮೆ ಕೊಬ್ಬು ಇರುವುದರಿಂದ ಜೀರ್ಣಿಸಿಕೊಳ್ಳುವುದೂ ಸುಲಭ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X