ಪಶ್ಚಿಮಬಂಗಾಳ: ಬಿಜೆಪಿ ಕಾರ್ಯಕರ್ತನ ಸಾವು

ಕೋಲ್ಕತಾ: ಪಶ್ಚಿಮಬಂಗಾಳದ ನಾಡಿಯಾ ಜಿಲ್ಲೆಯ ಗಾಯೆಶ್ಪುರದಲ್ಲಿ ರವಿವಾರ ಬಿಜೆಪಿ ಕಾರ್ಯಕರ್ತನ ಶವವು ಮರಕ್ಕೆ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಬಿಜಾಯ್ ಶಿಲ್ (34 ವರ್ಷ) ತಾನಿರುವ ಪ್ರದೇಶದಲ್ಲಿ ಬಿಜೆಪಿಯೊಂದಿಗೆ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ. ಜಿಲ್ಲೆಯ ಗಾಯೆಶ್ಪುರ ಮಹಾನಗರ ಪಾಲಿಕೆಯ ವಾರ್ಡ್ ನಂ.4ರಲ್ಲಿ ಶಿಲ್ ನಿವಾಸವಿದೆ.
ಸ್ಮಶಾನದ ಬಳಿಯ ಮಾವಿನ ಮರದಲ್ಲಿ ಶಿಲ್ ನೇಣು ಬಿಗಿದ ಸ್ಥಿತಿಯಲ್ಲಿರುವುದನ್ನು ರವಿವಾರ ಬೆಳಗ್ಗೆ ಸ್ಥಳೀಯರು ಗಮನಿಸಿದ್ದಾರೆ. ಕಲ್ಯಾಣಿ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಶವವನ್ನು ವಶಪಡಿಸಿಕೊಂಡಿದ್ದು, ಶವಪರೀಕ್ಷೆಗೆ ಕಳುಹಿಸಿಕೊಟ್ಟಿದ್ದಾರೆ.
ರಾಜಕೀಯ ಗೂಂಡಾಗಳು ಶಿಲ್ ನನ್ನು ಕೊಲೆ ಮಾಡಿ ಮರಕ್ಕೆ ನೇತು ಹಾಕಿದ್ದಾರೆ ಎಂದು ಬಿಜಾಯ್ ಶಿಲ್ ಕುಟುಂಬ ಸದಸ್ಯರು ಆರೋಪಿಸಿದ್ದಾರೆ.
Next Story





