23,000ಕ್ಕೂ ಅಧಿಕ ಸಸಿಗಳನ್ನು ನೆಟ್ಟಿರುವ ರಿಕ್ಷಾ ಚಾಲಕನಿಗೆ ಒಲಿದ ಪ್ರಶಸ್ತಿ

ಕೊಚ್ಚಿ: ಪರಿಸರ ಸಂರಕ್ಷಣೆಗೆ ಅಮೋಘ ಕೊಡುಗೆ ನೀಡಿದ ಸಮಾಜದ ಸಾಮಾನ್ಯ ಜನರನ್ನು ಗೌರವಿಸಲು ದಿವಂಗತ ಪತ್ರಕರ್ತ ಹಾಗೂ ಬರಹಗಾರ ಪಿ.ವಿ. ಥಾಂಪಿ ಸ್ಮರಣಾರ್ಥ ಸ್ಥಾಪಿಸಿರುವ ಈ ವರ್ಷದ ಪ್ರಶಸ್ತಿಗೆ ಪಾಲಕ್ಕಾಡ್ ನ ತೆಂಕುರುಸ್ಸಿಯ 51ರ ವಯಸ್ಸಿನ ಆಟೋ ಚಾಲಕ ಶ್ಯಾಮ್ ಕುಮಾರ್ ಅವರು ಭಾಜನರಾಗಿದ್ದಾರೆ.
ಕೊಡುವಾಯೂರ್, ಪೆರುಂವಾಂಬು ಹಾಗೂ ತೆಂಕುರಸ್ಸಿಯ ಪಂಚಾಯತ್ ಗಳಲ್ಲಿ 23,000ಕ್ಕೂ ಅಧಿಕ ಸಸಿಗಳನ್ನು ನೆಟ್ಟು ಪೋಷಿಸಿದ್ದಕ್ಕಾಗಿ ಕುಮಾರ್ ಗೆ ಈ ಪ್ರಶಸ್ತಿ ಲಭಿಸಿದೆ.
ನಾನು ಸಾಮಾನ್ಯವಾಗಿ ಜಮುನ್, ಬೇವು, ಪಾಮಿರಾ, ಪೀಪಲ್ ಹಾಗೂ ಇತರ ಪ್ರಬೇಧಗಳ ಬೀಜಗಳನ್ನು ರಸ್ತೆ ಬದಿಗಳಲ್ಲಿ ನೆಡುತ್ತೇನೆ ಹಾಗೂ ಅದರ ಹತ್ತಿರ ಒಂದು ಕೋಲನ್ನುಇಟ್ಟು ಸಸಿಗಳಿಗೆ ನೀರುಣಿಸಲು ಪ್ಲಾಸ್ಟಿಕ್ ಬಾಟಲಿಗಳನ್ನು ರಂಧ್ರ ಮಾಡಿ ಕಟ್ಟುತ್ತೇನೆ. ನಾನು ರಸ್ತೆ ಬದಿಗಳಲ್ಲಿ ನೆಟ್ಟ ಮರಗಳಿಂದ ಬೀಜ ಸಂಗ್ರಹಿಸುತ್ತೇನೆ. ನಾನು ಯಾವಾಗಲೂ 25 ಬೀಜಗಳನ್ನು ಒಯುತ್ತೇನೆ ಎಂದು ಶ್ಯಾಮ್ ಕುಮಾರ್ ಹೇಳಿದ್ದಾರೆ.
ತಮ್ಮ ಪ್ರದೇಶಗಳಲ್ಲಿ ಕೊಳ ಪುನರ್ ಜ್ಜೀವನಗೊಳಿಸುವ ಕಾರ್ಯದಲ್ಲಿ ಸಕ್ರಿಯರಾಗಿರುವ ಕುಮಾರ್ ಚಿತ್ತೂರಿನಲ್ಲಿರುವ ಸರಕಾರಿ ಕಾಲೇಜಿನ ವಿದ್ಯಾರ್ಥಿಗಳಿಗೆ ತಮ್ಮ ಎನ್ ಎಸ್ ಎಸ್ ಚಟುವಟಿಕೆಗಳಿಗೆ ಸಹಾಯ ಮಾಡುತ್ತಾರೆ.





