ಮಂಗಳೂರು ವಿಮಾನ ನಿಲ್ದಾಣಕ್ಕೆ ಕೋಟಿ ಚೆನ್ನಯ ಹೆಸರಿಡಿ : ಮಿಥುನ್ ರೈ ಆಗ್ರಹಕ್ಕೆ ಬೆಂಬಲ

ಮಿಥುನ್ ರೈ
ಮಂಗಳೂರು, ನ. 1: ಮಂಗಳೂರು ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ವಹಣೆಯ ಹೊಣೆಯನ್ನು ಅದಾನಿ ಸಮೂಹ ಸಂಸ್ಥೆ ವಹಿಸಿಕೊಂಡ ಬೆನ್ನಲ್ಲೇ ನಿಲ್ದಾಣಕ್ಕೆ ಕೋಟಿ-ಚೆನ್ನಯರ ಹೆಸರಿಡಬೇಕೆಂಬ ಕೂಗು ವ್ಯಾಪಕವಾಗುತ್ತಿದೆ.
ಮಂಗಳೂರು ವಿಮಾನ ನಿಲ್ದಾಣಕ್ಕೆ ಕೋಟಿ-ಚೆನ್ನಯರ ಹೆಸರಿಡಬೇಕೆಂಬ ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಅವರ ಆಗ್ರಹ ನ್ಯಾಯಯುತವಾಗಿದೆ. ತುಳುನಾಡಿದ ವೀರ ಪುರುಷರಾದ ಕೋಟಿ-ಚೆನ್ನಯರು ಈ ಗೌರವಕ್ಕೆ ಅರ್ಹರು. ಅದು ತುಳುನಾಡಿಗೆ ಹೆಮ್ಮೆ ತರುವ ವಿಚಾರ. ಆದ್ದರಿಂದ ಸರಕಾರ ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಅಧ್ಯಕ್ಷ ಅಬ್ದುರ್ರವೂಫ್ ಪುತ್ತಿಗೆ, ಹಿದಾಯ ಫೌಂಡೇಶನ್ ಅಧ್ಯಕ್ಷ ಮನ್ಸೂರ್ ಅಹ್ಮದ್ ಆಝಾದ್, ನಂಡೆ ಪೆಂಙಲ್ ಅಭಿಯಾನದ ಅಧ್ಯಕ್ಷ ನೌಶಾದ್ ಹಾಜಿ ಸೂರಲ್ಪಾಡಿ, 'ಉಮ್ಮಗಾಯಿಟ್ ಒರು ಆಗ' ಸಮಿತಿಯ ಅಧ್ಯಕ್ಷ ಮುಸ್ತಫ ಅಡ್ಡೂರು, ಆಸರ್ ವುಮೆನ್ಸ್ ಫೌಂಡೇಶನ್ ಅಧ್ಯಕ್ಷೆ ಸಬೀನಾ ಅಖ್ತರ್ ಪ್ರಕಟನೆಯಲ್ಲಿ ಆಗ್ರಹಿಸಿದ್ದಾರೆ.
Next Story





