ಅನೈತಿಕ ಸಂಬಂಧ ಶಂಕೆಯಿಂದ ಪತ್ನಿ, ಆಕೆಯ ಪ್ರಿಯಕರನ ಹತ್ಯೆ ಪ್ರಕರಣ: ಆರೋಪಿ ಪತಿ ಬಂಧನ

ದಾವಣಗೆರೆ: ಅನೈತಿಕ ಸಂಬಂಧ ಶಂಕೆ ವ್ಯಕ್ತಪಡಿಸಿ ಪತ್ನಿ, ಪ್ರಿಯಕರನನ್ನು ಕೊಲೆ ಮಾಡಿದ್ದ ಆರೋಪಿ ಪತಿಯನ್ನು ಬಂಧಿಸಲಾಗಿದೆ ಎಂದು ಎಸ್ಪಿ ಹನುಮಂತರಾಯ ತಿಳಿಸಿದರು.
ಶಿವಕುಮಾರ್ ಬಂಧಿತ ಆರೋಪಿ, ಇನ್ನೋಬ್ಬ ಆರೋಪಿ ಬಗ್ಗೆ ಸಂಪೂರ್ಣ ಮಾಹಿತಿಯಿದ್ದು ಶೀಘ್ರವೇ ಬಂಧಿಸಲಾಗುವುದು ಎಂದು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಘಟನೆ ವಿವರ: ಶಿವುಕುಮಾರ ಖಾಸಗಿ ಶಾಲೆಯ ಶಿಕ್ಷಕನಾಗಿದ್ದು ಚನ್ನಗಿರಿ ತಾಲೂಕಿನ ಕಾರಿಗನೂರು ಕ್ರಾಸ್ ಬಳಿ ಮನೆ ಮಾಡಿಕೊಂಡಿದ್ದ. ಶ್ವೇತ ಎಂಬ ಯುವತಿಯನ್ನು 9 ವರ್ಷಗಳ ಹಿಂದೆ ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಅದರೆ ಶ್ವೇತ ಅದೇ ಗ್ರಾಮದ ವೇದಮೂರ್ತಿಯೊಂದಿಗೆ ಅನೈತಿಕ ಸಂಬಂಧ ಹೊಂದಿರುವ ಬಗ್ಗೆ ಮಾಹಿತಿ ತಿಳಿದ ಶಿವಕುಮಾರ ಅನೇಕ ಬಾರಿ ಬುದ್ದಿ ಹೇಳಿದ್ದಾನೆ. ಇದೇ ವಿಚಾರವಾಗಿ ಇಬ್ಬರ ಮಧ್ಯೆ ಜಗಳವಾಗಿ ಮನೆ ಬಿಟ್ಟು ಆ.28 ರಂದು ಹೋಗಿದ್ದಾರೆ. ಅದೇ ದಿನ ಶ್ವೇತಾ ಮತ್ತು ವೇದಮೂರ್ತಿ ಇಬ್ಬರು ಹೊನ್ನಾಳ್ಳಿ ತಾಲೂಕಿನ ತುಂಗಾಭದ್ರಾ ನದಿಯ ದಡದ ಮೇಲೆ ಇರುವ ವಿಷಯ ತಿಳಿದ ಆರೋಪಿ ಶಿವಕುಮಾರ ತನ್ನ ಸಹೋದರನೊಂದಿಗೆ ಅಲ್ಲಿಗೆ ತೆರಳಿ ವೇದಮೂರ್ತಿಯನ್ನು ಉಸಿರುಕಟ್ಟಿ ಕೊಲೆ ಮಾಡಿ ನದಿಗೆ ಬಿಸಾಕಿದ್ದಾನೆ. ನಂತರ ತನ್ನ ಹೆಂಡತಿಗೆ ಇಬ್ಬರು ಆತ್ಮಹತ್ಯೆ ಮಾಡಿಕೊಳ್ಳೋಣ ಎಂದು ಹೇಳಿ ಚನ್ನಗಿರಿಗೆ ಬಂದು ಅಲ್ಲಿನ ತರಾಜಗೊಂಡನಹಳ್ಳಿ ಬಳಿಯ ಗ್ರಾಮದ ತೋಟಕ್ಕೆ ಕರೆದುಕೊಂಡು ಹೋಗಿ ಉಸಿರುಗಟ್ಟಿಸಿ ಕೊಲೆ ಮಾಡಿ ಬಾವಿಯಲ್ಲಿ ಬಿಸಾಕಿ ಪರಾರಿಯಾದ್ದಾನೆ. ಈ ಸಂಬಂಧ ಶ್ವೇತಾರ ಸಹೋದರ ಪ್ರಕರಣ ದಾಖಲಿಸಿದ್ದಾರೆ. ಚನ್ನಗಿರಿ ಮತ್ತು ಹೊನ್ನಾಳ್ಳಿ ಪೊಲೀಸರು ಕಾರ್ಯಪ್ರವೃತ್ತರಾಗಿ 24 ಗಂಟೆಯಲ್ಲಿ ಬೆಂಗಳೂರಿನಲ್ಲಿದ್ದ ಆರೋಪಿಯನ್ನು ದಸ್ತಗಿರಿ ಮಾಡಿಕೊಂಡು ಬಂದಿದ್ದಾರೆ ಎಂದು ಮಾಹಿತಿ ನೀಡಿದರು.
ಪ್ರಕರಣ ಪತ್ತೆ ಹಚ್ಚುವಲ್ಲಿ ಯಶಸ್ವಿಯಾದ ಚನ್ನಗಿರಿ ಉಪವಿಭಾಗಾದ ಡಿವೈಎಸ್‍ಪಿ ಪ್ರಶಾಂತ ಜಿ ಮುನ್ನೋಳ್ಳಿ, ಚನ್ನಗಿರಿ ಸಿಪಿಐ ಆರ್‍ಆರ್ ಪಾಟೀಲ್, ಪಿಎಸ್‍ಐ ಜಗದೀಶ್, ರೂಪ್ಲಿಬಾಯಿ ಸಿಬ್ಬಂದಿಗಳನ್ನು ಅಭಿನಂದಿಸಿ ಬಹುಮಾನ ಘೋಷಿಸಿದರು.
ಈ ವೇಳೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಜೀವ ಉಪಸ್ಥಿತರಿದ್ದರು.





