ಮಂಗಳೂರು : ನ.3ಕ್ಕೆ ವಿವಿಧೆಡೆ ವಿದ್ಯುತ್ ನಿಲುಗಡೆ
ಮಂಗಳೂರು, ನ.1: ತಾಲೂಕಿನ ವಿವಿಧೆಡೆ ವಿವಿಧ ಉಪಕೇಂದ್ರಗಳಿಂದ ಹೊರಡುವ ಫೀಡರ್‌ಗಳಲ್ಲಿ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿದ್ದು, ಅ.3ರಂದು ವಿದ್ಯುತ್ ನಿಲುಗಡೆಯಾಗಲಿದೆ.
ಹೊಸಬೆಟ್ಟು/ಪಣಂಬೂರು: ನ.3ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 3 ಗಂಟೆಯವರೆಗೆ 11 ಕೆ.ವಿ. ಹೊಸಬೆಟ್ಟು ಹಾಗೂ ಪಣಂಬೂರು ಫೀಡರ್ ಗಳಲ್ಲಿ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿದ್ದು, ಬೈಕಂಪಾಡಿ, ಗೋಕುಲ್ ನಗರ, ದುರ್ಗಾನಗರ, ಹೊಸಬೆಟ್ಟು, ಕುಳಾಯಿ, ತಾವರೆಕೊಳ, ಹೊನ್ನಕಟ್ಟೆ, ಆಚಾರಿ ಕಾಲನಿ, ಪಣಂಬೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ.
ಮೂಡುಬಿದಿರೆ: ನ.3ರಂದು ಬೆಳಗ್ಗೆ 10ರಿಂದ ಸಂಜೆ 4 ಗಂಟೆಯವರೆಗೆ ಕೆಪಿಟಿಸಿಎಲ್ ವತಿಯಿಂದ 110/11 ಕೆ.ವಿ. ಮೂಡುಬಿದಿರೆ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ 11 ಕೆ.ವಿ. ಮೂಡುಬಿದಿರೆ, ಕೋಟೆಬಾಗಿಲು, ಕಡಂದಲೆ, ನಿಡ್ಡೋಡಿ, ತೋಡಾರ್, ಶಿರ್ತಾಡಿ, ಬೆಳುವಾಯಿ ಫೀಡರ್‌ಗಳಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಳ್ಳಲಾಗಿದೆ.
ಮೂಡುಬಿದಿರೆ ಪೇಟೆ, ಮಾಸ್ತಿಕಟ್ಟೆ, ಗಾಂಧೀನಗರ, ಮಹಾವೀರ ಕಾಲೇಜು, ಒಂಟಿಕಟ್ಟೆ, ಕಡಲಕೆರೆ, ನಾಗರಕಟ್ಟೆ, ಅರಮನೆಬಾಗಿಲು, ಜ್ಯೋತಿ ನಗರ, ಜೈನ್‌ಪೇಟೆ, ಶೇಡಿಗುರಿ, ಹೊಸಬೆಟ್ಟು, ಪುಚ್ಚೆಮೊಗರು, ಅಲಂಗಾರು, ಕೋಟೆಬಾಗಿಲು, ಪ್ರಾಂತ್ಯ, ಕಲ್ಲಬೆಟ್ಟು, ಗಂಟಾಲ್‌ಕಟ್ಟೆ, ಬಿರಾವು, ತಾಕೊಡೆ, ಮಾರೂರು, ಹೊಸಂಗಡಿ, ಪಳಕಳ, ಗುಡ್ಡೆ ಅಂಗಡಿ, ಮುರ್ಕದ್‌ಪಲ್ಕೆ, ಕೊಡ್ಯಡ್ಕ, ಕೇಮಾರ್, ಪಾಲಡ್ಕ, ವರ್ಣಬೆಟ್ಟು, ಮುಂಡ್ರುದೆ, ಜೋಡುಕಟ್ಟೆ, ಕಡಂದಲೆ ಪಲ್ಕೆ, ಬೊಮ್ಮಳಗುಡ್ಡೆ, ನೆಲ್ಲಿಗುತ್ತು, ಕಲ್ಲೋಳಿ, ನಿಡ್ಡೋಡಿ, ಸಂಪಿಗೆ, ಕಲ್ಲಮುಂಡ್ಕೂರು, ಕುದ್ರಿಪದವು, ಅಶ್ವತ್ಥಪುರ, ಮಂಗೆಬೆಟ್ಟು, ನೀರ್ಕೆರೆ, ಕಾಯರ್ ಮುಗೇರ್, ಚಕ್ಕುಪಾದೆ, ಕೊಪ್ಪಳ, ಪುತ್ತಿಗೆಪದವು, ಹಂಡೇಲು, ಬಂಗೆಬೆಟ್ಟು, ತೋಡಾರು, ಪಡೀಲು, ಮಿಜಾರ್, ಮೈಟ್, ಕೊಪ್ಪದಕುಮೇರು, ತೋಡಾರ್, ಗರಡಿ, ಕಾನ, ನಡಿಗುಡ್ಡೆ, ಕಾಂತಾವರ ಕ್ರಾಸ್, ಬೆಳುವಾಯಿ, ಬನ್ನಡ್ಕ, ಕಾಯರ್ ಕಟ್ಟೆ, ಆಝಾದ್‌ನಗರ, ಕರಿಯನಂಗಡಿ, ಕೆಸರ್‌ಗದ್ದೆ, ಗುಂಡುಕಲ್ಲು, ಮೂಡುಮಾರ್ನಾಡು, ಕೆಲ್ಲಪುತ್ತಿಗೆ, ದರೆಗುಡ್ಡೆ, ಪಣಪಿಲ, ಅರಸುಕಟ್ಟೆ, ಬಸವನಕಜೆ, ಅಮನೊಟ್ಟು, ಜೋಗೊಟ್ಟು, ವಾಲ್ಪಾಡಿ, ಮಕ್ಕಿ, ಅಳಿಯೂರು, ಮಾಂಟ್ರಾಡಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ.
ಗುರುಪುರ: ನ.3ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 1:30ರವರೆಗೆ ಕೆಪಿಟಿಸಿಎಲ್ ವತಿಯಿಂದ 110/11 ಕೆ.ವಿ. ಗುರುಪುರ ಉಪಕೇಂದ್ರದಿಂದ ಹೊರಡುವ 11 ಕೆ.ವಿ. ಗುರುಪುರ, ಪೊಳಲಿ, ಕುಪ್ಪೆಪದವು, ಕುಕ್ಕಟ್ಟೆ ಮತ್ತು ಮುಚ್ಚೂರು ಫೀಡರ್‌ಗಳಲ್ಲಿ ತುರ್ತು ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಳ್ಳಲಾಗಿದೆ.
ಗುರುಪುರ ಪೇಟೆ, ಆಲೈಗುಡ್ಡೆ, ಕೊಟ್ಟಾರಿಗುಡ್ಡೆ, ಮಠದಗುಡ್ಡೆ, ಮುಂಡೇವು, ಬಡಗ ಎಡಪದವು, ತೆಂಕ ಎಡಪದವು, ದಡ್ಡಿ, ಉರ್ಕಿ, ಪೂಪಾಡಿ ಕಲ್ಲು, ಕುಪ್ಪೆಪದವು, ಕಿಲೆಂಜಾರು, ಕುಳವೂರು, ಪೂಮಾರಪದವು, ಮುಂಡೇವು, ಗಾಂಧೀನಗರ, ಎಡಪದವು, ಮಿಜಾರು, ಗರಡಿ, ಸುರಲ್ಪಾಡಿ, ಗಂಜೀಮಠ, ಪೊಳಲಿ, ಬಡಕಬೈಲು, ತೆಂಕ ಬೆಳ್ಳೂರು, ಬಡಗ ಬೆಳ್ಳೂರು, ಅಮ್ಮುಂಜೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ ಎಂದು ಮೆಸ್ಕಾಂ ಪ್ರಕಟನೆ ತಿಳಿಸಿದೆ.