ಎನ್‌ಎಂಪಿಟಿಯಲ್ಲಿ ಕನ್ನಡ ರಾಜ್ಯೋತ್ಸವ

ಮಂಗಳೂರು, ನ.1: ಕನ್ನಡ ಸಂಘ ಮತ್ತು ನವ ಮಂಗಳೂರು ಬಂದರು ಮಂಡಳಿ (ಎನ್‌ಎಂಪಿಟಿ) ಜಂಟಿಯಾಗಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಜವಾಹರಲಾಲ್ ನೆಹರೂ ಜನ್ಮ ಶತಾಬ್ದಿ ಸಭಾಭವನದ ಹೊರಾಂಗಣದಲ್ಲಿ ಸರಳ ರೀತಿಯಲ್ಲಿ ಆಚರಿಸಲಾಯಿತು.
ಬಂದರು ಮಂಡಳಿಯ ಅಧ್ಯಕ್ಷ ವೆಂಕಟರಮಣ ಅಕ್ಕರಾಜು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಉಪಾಧ್ಯಕ್ಷ ಕೆ.ಜಿ. ನಾಥ್, ಸಾರಿಗೆ ಪ್ರಬಂಧಕ ವೈ.ಆರ್.ಬೆಳಗಲ್, ಕನ್ನಡ ಸಂಘದ ಅಧ್ಯಕ್ಷೆ ಆಶಾಕುಮಾರಿ, ಪ್ರಧಾನ ಕಾರ್ಯದರ್ಶಿ ನೋರ್ಬಟ್ ಮಿಸ್ಕಿತ್ ವೇದಕೆಯಲ್ಲಿ ಉಪಸ್ಥಿತರಿದ್ದರು.
Next Story





