ಯುವತಿ ನಾಪತ್ತೆ
ಮಂಗಳೂರು, ನ.1: ನಗರದ ಹೊರವಲಯದ ಸುರತ್ಕಲ್‌ನ ಯುವತಿ ನಾಪತ್ತೆಯಾದ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುರತ್ಕಲ್ ನಿವಾಸಿ ರಶ್ಮಿತಾ (17) ನಾಪತ್ತೆಯಾದವರು.
ಮನೆಯಲ್ಲೇ ಮಲಗಿದ್ದ ಯುವತಿಯು ಅ..31ರಂದು ಮಧ್ಯರಾತ್ರಿ 12ರಿಂದ ನ.1ರ ನಸುಕಿನಜಾವ 4 ಗಂಟೆಯೊಳಗೆ ನಾಪತ್ತೆಯಾಗಿದ್ದಾರೆ. ಕಳೆದ ಮೂರು ತಿಂಗಳಿಂದ ಮಡಿಕೇರಿ ಮೂಲದ ನವೀನ್ ಎಂಬವರು ತಮ್ಮ ಮನೆಯಲ್ಲೇ ಉಳಿದುಕೊಂಡಿದ್ದರು. ಆತನ ಜೊತೆ ಹೋಗಿರಬಹುದೆಂದು ಪೋಷಕರು ದೂರಿನಲ್ಲಿ ತಿಳಿಸಿದ್ದಾರೆ.
ಚಹರೆ: 122 ಸೆಂ.ಮೀ. ಎತ್ತರ, ಕಪ್ಪು ಉದ್ದನೆಯ ಕೂದಲು, ಗೋಧಿ ಮೈಬಣ್ಣ, ದುಂಡನೆಯ ಮುಖ, ಸಪೂರ ಶರೀರ. ಕಪ್ಪು ಬಣ್ಣದ ಜೀನ್ಸ್ ಪ್ಯಾಂಡ್ ಮತ್ತು ಟೀ ಶರ್ಟ್ ಧರಿಸಿದ್ದರು. ಕನ್ನಡ, ತುಳು ಮಾತನಾಡುತ್ತಾರೆ.
ಯುವತಿಯ ಬಗ್ಗೆ ಮಾಹಿತಿ ತಿಳಿದುಬಂದಲ್ಲಿ ಸುರತ್ಕಲ್ ಠಾಣೆ (0824-2220540)ಸಂಪರ್ಕಿಸಲು ಪ್ರಕಟನೆ ತಿಳಿಸಿದೆ.
Next Story