ಮುಖೇಶ್ ಅಂಬಾನಿ, ಕುಟುಂಬದ ಝಡ್ ಪ್ಲಸ್ ಭದ್ರತೆ ಹಿಂದೆ ತೆಗೆಯುವಂತೆ ಕೋರಿದ ಪಿಐಎಲ್ ತಿರಸ್ಕರಿಸಿದ ಸುಪ್ರೀಂ ಕೋರ್ಟ್

ಹೊಸದಿಲ್ಲಿ, ನ. 1: ರಿಲಾಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಹಾಗೂ ಅವರ ಕುಟುಂಬಕ್ಕೆ ನೀಡಲಾದ ಝಡ್ ಪ್ಲಸ್ ಭದ್ರತೆ ಹಿಂದೆ ತೆಗೆಯುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ದಾವೆಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಬಾಂಬೆ ಉಚ್ಚ ನ್ಯಾಯಾಲಯದ 2019 ಡಿಸೆಂಬರ್ ಆದೇಶದ ವಿರುದ್ಧ ದೂರುದಾರ ಹಿಮಾಂಶು ಅಗರ್ವಾಲ್ ಸಲ್ಲಿಸಿದ ಮನವಿಯನ್ನು ನ್ಯಾಯಮೂರ್ತಿ ಅಶೋಕ್ ಭೂಷಣ್ ನೇತೃತ್ವದ ಪೀಠ ತಿರಸ್ಕರಿಸಿದೆ.
‘‘ಪ್ರಕರಣದ ಆಧಾರದಲ್ಲಿ ವ್ಯಕ್ತಿಯ ಬೆದರಿಕೆಯ ಗ್ರಹಿಕೆಯನ್ನು ನಿರ್ಣಯಿಸುವುದು ಹಾಗೂ ಪರಿಶೀಲಿಸುವುದು ರಾಜ್ಯದ ಕೆಲಸವಾಗಿದೆ’’ ಎಂದು ನ್ಯಾಯಾಲಯ ತನ್ನ ಕಳೆದ ವಾರದ ಆದೇಶದಲ್ಲಿ ಹೇಳಿತ್ತು.
ಗಂಭೀರ ಬೆದರಿಕೆಗಳನ್ನು ಗಮನದಲ್ಲಿ ಇರಿಸಿಕೊಂಡು ತಮ್ಮ ಜೀವ ರಕ್ಷಿಸಲು ಸಂಪೂರ್ಣ ಭದ್ರತಾ ವೆಚ್ಚವನ್ನು ಭರಿಸಲು ಸಿದ್ಧರಿರುವ ವ್ಯಕ್ತಿಗಳಿಗೆ ಝಡ್ ಪ್ಲಸ್ ಭದ್ರತೆ ಒದಗಿಸಲು ರಾಜ್ಯ ಬದ್ದವಾಗಿದೆ ಎಂದು ಬಾಂಬೆ ಹೈಕೋರ್ಟ್ ಹೇಳಿತ್ತು.
Next Story





