ಪಡುಬಿದ್ರಿಯಲ್ಲಿ ಕನ್ನಡ ರಾಜ್ಯೋತ್ಸವ

ಪಡುಬಿದ್ರಿ : ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಕರ್ನಾಟಕ ರಕ್ಷಣಾ ವೇದಿಕೆ ಯುವಸೇನೆ ಉಡುಪಿ ಜಿಲ್ಲೆ ಇದರ ವತಿಯಿಂದ ಧ್ವಜಾರೋಹಣ ಕಾರ್ಯಕ್ರಮ ವನ್ನು ಪಡುಬಿದ್ರಿ ಯಲ್ಲಿ ನಡೆಸಲಾಯಿತು.
ಪಡುಬಿದ್ರಿ ಪೊಲೀಸ್ ಠಾಣಾಧಿಕಾರಿ ದಿಲಿಪ್ ಕುಮಾರ್ ರವರು ಧ್ವಜಾರೋಹಣ ಮಾಡಿದರು. ಕ.ರ.ವೇ ಯುವಸೇನೆ ಉಡುಪಿ ಜಿಲ್ಲಾಧ್ಯಕ್ಷ ರಹ್ಮಾನ್ ಪಡುಬಿದ್ರಿ, ಜಿಪಂ ಸದಸ್ಯ ಶಶಿಕಾಂತ್ ಪಡುಬಿದ್ರಿ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಲತಾ ಶೆಟ್ಟಿ, ಜಿಲ್ಲಾ ಉಪಾಧ್ಯಕ್ಷ ಪ್ರಣಮ್ ಕುಕ್ಕಿಕಟ್ಟೆ, ಉಡುಪಿ ಜಿಲ್ಲಾ ಕಾರ್ಯದರ್ಶಿ ಮಸ್ತಾಕ್ ಅಲೀ, ಕಾಪು ತಾಲೂಕು ಅಧ್ಯಕ್ಷ ಸುಜಿತ್ ಕಂಚಿನಡ್ಕ, ಸಂಚಾಲಕ ಸಫ್ವಾನ್,ಪಡುಬಿದ್ರಿ ಘಟಕದ ಜಮಾಲ್, ಇಬುನ್ ಅಬ್ಬಾಸ್, ಪಡುಬಿದ್ರಿ ಉರ್ದು ಶಾಲಾ ಎಸ್.ಡಿ.ಎಮ್.ಸಿ ಅಧ್ಯಕ್ಷ ಅಬ್ದುಲ್ ಹಮೀದ್, ಕಂಚಿನಡ್ಕ ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷ ಯೋಗಿಶ್, ಫಿರೋಝ್ ಪಡುಬಿದ್ರಿ, ಎಂ.ಎಸ್ ಮನ್ಸೂರ್ ಪಡುಬಿದ್ರಿ, ಅಬೂಬಕರ್ ಮಂಚಕಲ್ ಹಾಗೂ ಜುಬೈರ್ ಪಡುಬಿದ್ರಿ ಮತ್ತಿತರರು ಉಪಸ್ಥಿತರಿದ್ದರು.
Next Story





