ಖಾಝಿ ಸ್ಥಾನ ಜವಾಬ್ದಾರಿಯಿಂದ ನಿರ್ವಹಿಸಬೇಕಾದ ಹುದ್ದೆ: ಮುತ್ತು ಕೋಯ ತಂಙಳ್
ಮಿತ್ತಬೈಲ್ ಜಮಾಅತ್ ನ ನೂತನ ಖಾಝಿ ಸ್ವೀಕಾರ ಸಮಾರಂಭ

ಬಂಟ್ವಾಳ, ನ.1: ಖಾಝಿ ಸ್ಥಾನ ಜವಾಬ್ದಾರಿ ಮತ್ತು ಅತೀ ಜಾಗ್ರತೆಯಿಂದ ನಿಭಾಯಿಸಬೇಕಾದ ಪ್ರಮುಖ ಹುದ್ದೆಯಾಗಿದೆ. ಸ್ವಲ್ಪ ಉದಾಸೀನ ತೋರಿದರೂ ಇಡೀ ಸಮುದಾಯದಲ್ಲಿ ಸಂಕಷ್ಟ, ಸಮಸ್ಯೆಗಳು ಉಂಟಾಗಲಿದ್ದು ಅದಕ್ಕೆ ಖಾಝಿಯೇ ಜವಾಬ್ದಾರರು ಮತ್ತು ಹೊಣೆಗಾರರಾಗು ತ್ತಾರೆ ಎಂದು ಸಮಸ್ತ ಕೇರಳ ಜಂಇಯ್ಯತುಲ್ ಉಲೆಮಾದ ಅಧ್ಯಕ್ಷ ಅಸೈಯದ್ ಮುಹಮ್ಮದ್ ಜಿಫ್ರಿ ಮುತ್ತು ಕೋಯ ತಂಙಳ್ ಹೇಳಿದರು.
ಬಿ.ಸಿ.ರೋಡ್ ಸಮೀಪದ ಮಿತ್ತಬೈಲ್ ಮುಹಿಯಿದ್ದೀನ್ ಸಮುದಾಯ ಭವನದಲ್ಲಿ ರವಿವಾರ ಸಂಜೆ ನಡೆದ ಮುಹಿಯುದ್ದೀನ್ ಜುಮಾ ಮಸೀದಿ ಮಿತ್ತಬೈಲ್ ಜಮಾಅತ್ ನ ಖಾಝಿ ಸ್ಥಾನ ಸ್ವೀಕರಿಸಿ ಅವರು ಮಾತನಾಡಿದರು.
ಈ ಜಮಾಅತ್ ನ ಖಾಝಿ ಸ್ಥಾನವನ್ನು ಸ್ವೀಕರಿಸಿದ ಈ ಕ್ಷಣದಿಂದ ಜವಾಬ್ದಾರಿಯುತವಾಗಿ ಮತ್ತು ಅಚ್ಚುಕಟ್ಟಾಗಿ ತನ್ನ ಕಾರ್ಯವನ್ನು ನಿರ್ವಹಿಸು ತ್ತೇನೆ. ಪ್ರತೀಯೊಂದು ಮುಹಲ್ಲಾಗಳಿಗೆ ಖಾಝಿಯ ಅವಶ್ಯಕತೆ ಇದೆ. ಖಾಝಿಯನ್ನು ಶರೀಅತ್ ಪ್ರಕಾರವೇ ನೇಮಿಸಬೇಕು ಮತ್ತು ನೇಮಿಸಿದ ಖಾಝಿಯ ನೇತೃತ್ವವನ್ನು ಮುಹಲ್ಲಾದ ಜನರು ಅನುಸರಿಸಬೇಕು ಎಂದು ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಝೈನುಲ್ ಆಬಿದೀನ್ ತಂಙಳ್ ಕುನ್ನುಂಗೈ, ಮುಸ್ಲಿಮ್ ಸಮುದಾಯಕ್ಕೆ ನೇತೃತ್ವ ನೀಡುತ್ತಿ ರುವ ಸಮಸ್ತ ಕೇರಳ ಜಂಇಯ್ಯತುಲ್ ಉಲೆಮಾದ ಅಧ್ಯಕ್ಷ ಅಸೈಯದ್ ಮುಹಮ್ಮದ್ ಜಿಫ್ರಿ ಮುತ್ತು ಕೋಯ ತಂಙಳ್ ಅವರು ಮಿತ್ತಬೈಲ್ ಜಮಾಅತಿನ ಖಾಝಿ ಸ್ಥಾನವನ್ನು ಸ್ವೀಕರಿಸುತ್ತಿರುವುದು ಈ ಜಮಾಅತ್ ನವರಿಗೆ ಲಭಿಸಿದ ಭಾಗ್ಯವಾಗಿದೆ. ಉಲೆಮಾಗಳ ನೇತೃತ್ವವನ್ನು ಅನುಸರಿಸಿದಾಗ ಸಮುದಾಯದಲ್ಲಿರುವ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಾಣಲು ಸಾಧ್ಯ ಎಂದು ಹೇಳಿದರು.
ಸಮಸ್ತ ಕೇಂದ್ರ ಮುಶಾವರದ ಸದಸ್ಯ ಬಂಬ್ರಾಣ ಉಸ್ತಾದ್ ಖಾಝಿಯ ಪರಿಚಯವನ್ನು ಮಾಡಿದರು. ಹಾಜಿ ಅಬ್ದುಲ್ ಹಮೀದ್ ಎ.ಕೆ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.
ಝೈನುಲ್ ಆಬಿದೀನ್ ಜಿಫ್ರಿ ತಂಙಳ್ ಪೊಸೊಟ್, ಪಾತೂರು ಉಸ್ತಾದ್, ಕೆ.ಎಸ್.ಅಲಿ ತಂಙಳ್ ಕುಬೊಳ್, ಹುಸೈನ್ ಬಾಅಲವಿ ತಂಙಳ್ ಕುಕ್ಕಾಜೆ, ಬೊಳ್ಳೂರ್ ಉಸ್ತಾದ್, ಉಮರುಲ್ ಫಾರೂಕ್ ಫೈಝಿ, ಎಂ.ವೈ.ಅಶ್ರಫ್ ಫೈಝಿ, ಇಬ್ರಾಹೀಂ ಬಾಖವಿ ಕೆ.ಸಿ.ರೋಡ್, ಉಸ್ಮಾನ್ ಫೈಝಿ ತೋಡಾರ್, ಅನೀಸ್ ಕೌಸರಿ, ಅಬ್ದುಲ್ ಖಾದರ್ ದಾರಿಮಿ ಕುಕ್ಕಿಲ, ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು, ಅಬ್ದುಲ್ ಲತೀಫ್ ದಾರಿಮಿ ರೆಂಜಲಾಡಿ, ಖಾಸಿಂ ದಾರಿಮಿ, ಇಸ್ಮಾಯಿಲ್ ಯಮಾನಿ, ಇರ್ಷಾದ್ ದಾರಿಮಿ ಮಿತ್ತಬೈಲ್, ಹಾಸಿಮ್ ಉಸ್ತಾದ್ ಮಿತ್ತಬೈಲ್, ಫಕ್ರುದ್ದೀನ್ ದಾರಿಮಿ, ಮುಹ್ ಸಿನ್ ಫೈಝಿ, ಅಶ್ಫಾಕ್ ಫೈಝಿ, ಆಬಿದ್ ಉಸ್ತಾದ್, ಅಬೂಬಕ್ಕರ್ ಸಿದ್ಧೀಕ್ ದಾರಿಮಿ, ಕೆ.ಕೆ.ಸುಲೈಮಾನ್ ಫೈಝಿ ಕಣಿಯೂರ್, ಅಬ್ದುಲ್ ಖಾದರ್ ಹಾಜಿ, ಮಾಜಿ ಮೇಯರ್ ಅಶ್ರಫ್ ಮಂಗಳೂರು ಸಹಿತ ಮೊದಲಾದವರು ಮುಖ್ಯ ಅತಿಥಿಯಾಗಿ ಭಾಗವಹಿಸಿದರು.
ಮಿತ್ತಬೈಲ್ ಜುಮಾ ಮಸೀದಿಯ ಕೋಶಾಧಿಕಾರಿ ಎಸ್.ಎಂ.ಮುಹಮ್ಮದ್ ಅಲಿ, ಉಪಾಧ್ಯಕ್ಷರಾದ ಮುಹಮ್ಮದ್ ಸಾಗರ್, ಅಬ್ದುಲ್ ರಹ್ಮಾನ್ ಎಸ್.ಎಚ್., ಜೊತೆ ಕಾರ್ಯದರ್ಶಿಗಳಾದ ಆದಂ ಪಲ್ಲ, ಅಶ್ರಫ್ ಶಾಂತಿಅಂಗಡಿ ಮೊದಲಾದವರು ಉಪಸ್ಥಿತರಿದ್ದರು.
ಇದೇ ವೇಳೆ ದಕ್ಷಿಣ ಕನ್ನಡ ಜಿಲ್ಲಾ ಜಂಇಯ್ಯತುಲ್ ಮುಹಲ್ಲಿಮೀನ್, ಕರ್ನಾಟಕ ಫೈಝೀಸ್ ಅಸೋಸಿಯೇಷನ್, ದಕ್ಷಿಣ ಕನ್ನಡ ಜಿಲ್ಲಾ ಎಸ್ಕೆಎಸ್ಸೆಸ್ಸೆಫ್, ಕಿದ್ಮತುಲ್ ಇಸ್ಲಾಮ್ ಕಮಿಟಿ ಪರ್ಲ್ಯ, ಹಿದಾಯತುಲ್ ಇಸ್ಲಾಮ್ ಮದರಸ ತಾಳಿಪಡ್ಪು, ಮದೀನ ಮಸೀದಿ ನಂದರಬೆಟ್ಟು, ಅಲ್ ಅರಫ ಮಸೀದಿ ಕೆಳಗಿನ ಮಿತ್ತಬೈಲ್, ಮುಸ್ಲಿಮ್ ಯಂಗ್ ಮೆನ್ಸ್ ಅಸೋಸಿಯೇಷನ್ ಶಾಂತಿಅಂಗಡಿ, ನುಸ್ರತ್ ಮೀಲಾದುನ್ನಬಿ ಸಂಘ ಶಾಂತಿಅಂಗಡಿ, ಇಮ್ದಾದ್ ಹೆಲ್ಪ್ ಲೈನ್ ಚಾರಿಟಿ ಶಾಂತಿಅಂಗಡಿ, ನೂರಾನಿಯಾ ಅಸೋಸಿಯೇಷನ್ ಪರ್ಲ್ಯ, ಮಿಲಾದ್ ಗ್ರೂಪ್ ಪರ್ಲ್ಯ, ಅಲ್ ಬದ್ರಿಯಾ ಅಸೋಸಿಯೇಷನ್ ಮದ್ದ, ಮೌನತುಲ್ ಮಸಾಕೀನ್ ತಾಳಿಪಡ್ಪು, ಇಹ್ಸಾನ್ ಮೀಲಾದುನ್ನಭಿ ಸಂಘ, ಎಸ್.ವೈ.ಎಸ್. ಮಿತ್ತಬೈಲ್, ಎಸ್ಕೆಎಸ್ಸೆಸ್ಸೆಫ್ ಬಿ.ಸಿ.ರೋಡ್, ಎಸ್ಕೆಎಸ್ಸೆಸ್ಸೆಫ್ ಶಾಂತಿಅಂಗಡಿ, ಎಸ್ಕೆಎಸ್ಸೆಸ್ಸೆಫ್ ಪರ್ಲ್ಯ, ತರ್ಬಿಯತುಲ್ ರಿಫಾಯಿ ದಫ್ ಕಮಿಟಿ ತಾಳಿಪಡ್ಪು, ಇರ್ಷಾದುಲ್ ಮಸಾಕೀನ್ ಅಸೋಸಿಯೇಷನ್ ನಂದರಬೆಟ್ಟು, ಅಲ್ ಬಿರ್ರ್ ಕರ್ನಾಟಕ, ಮದೀನತುಲ್ ಉಲಮಾ ಮಿತ್ತಬೈಲ್ ಸಂಘಟನೆಗಳ ವತಿಯಿಂದ ನೂತನ ಖಾಝಿಯನ್ನು ಸನ್ಮಾನಿಸಲಾಯಿತು.
ಮಿತ್ತಬೈಲ್ ಜುಮಾ ಮಸೀದಿಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಸಲಾಂ ಬಿ.ಎಚ್. ಸ್ವಾಗತಿಸಿದರು. ಲೆಕ್ಕ ಪರಿಶೋಧಕ ಮುಹಮ್ಮದ್ ಅದ್ದೇಡಿ ವಂದಿಸಿದರು. ಜೊತೆ ಕಾರ್ಯದರ್ಶಿ ಅಕ್ಬರ್ ಅಲಿ ಕಾರ್ಯಕ್ರಮ ನಿರೂಪಿಸಿದರು.






.jpeg)


.jpeg)


.jpeg)


