ಫಿಲಿಪ್ಪೀನ್ಸ್: ‘ಗೋನಿ’ ಚಂಡಮಾರುತಕ್ಕೆ 20 ಬಲಿ

ಮನಿಲಾ (ಫಿಲಿಪ್ಪೀನ್ಸ್), ನ. 2: ಫಿಲಿಪ್ಪೀನ್ಸ್ ಕರಾವಳಿಗೆ ರವಿವಾರ ಅಪ್ಪಳಿಸಿರುವ ಪ್ರಬಲ ಚಂಡಮಾರುತ ‘ಗೋನಿ’ಗೆ ಕನಿಷ್ಠ 20 ಮಂದಿ ಬಲಿಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭೀಕರ ಮಳೆ-ಗಾಳಿಯಿಂದಾಗಿ ಸಾವಿರಾರು ಮನೆಗಳು ನಾಶವಾಗಿವೆ ಹಾಗೂ ಚಂಡಮಾರುತದ ಅತಿ ಹೆಚ್ಚಿನ ಪ್ರಕೋಪಕ್ಕೆ ಒಳಗಾಗಿರುವ ಪ್ರದೇಶಗಳಲ್ಲಿ ಸಂಪರ್ಕ ವ್ಯವಸ್ಥೆಗಳು ಸಂಪೂರ್ಣ ಕಡಿದುಹೋಗಿವೆ.
ಕ್ಯಾಟಂಡ್ವೇನ್ಸ್ ದ್ವೀಪ ಮತ್ತು ಸಮೀಪದ ಲುರೊನ್ ದ್ವೀಪದಲ್ಲಿರುವ ಅಲ್ಬಯ್ ರಾಜ್ಯ ಚಂಡಮಾರುತ ‘ಗೋನಿ’ಯ ಹೆಚ್ಚಿನ ಪ್ರಕೋಪಕ್ಕೆ ಒಳಗಾಗಿವೆ. ಚಂಡಮಾರುತವು ಗಂಟೆಗೆ 225 ಕಿ.ಮೀ. ಅಪರಿಮಿತ ವೇಗದಲ್ಲಿ ಫಿಲಿಪ್ಪೀನ್ಸ್‌ನ ಪೂರ್ವ ಕರಾವಳಿಗೆ ಅಪ್ಪಳಿಸಿತು.
ಭೀಕರ ಬಿರುಗಾಳಿ ಮತ್ತು ಭಾರೀ ಮಳೆಗೆ ಸಿಲುಕಿ ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿದವು. ಕ್ಷಣಗಳಲ್ಲೇ ಪ್ರವಾಹ ಉಕ್ಕೇರಿತು ಹಾಗೂ ಭೂಕುಸಿತಗಳು ಸಂಭವಿಸಿದವು.
ಬಳಿಕ ಚಂಡಮಾರುತವು ತನ್ನ ತೀವ್ರತೆ ಕಳೆದುಕೊಂಡು ರಾಜಧಾನಿ ಮನಿಲಾಕ್ಕೆ ಸುತ್ತು ಹಾಕಿಕೊಂಡು ದಕ್ಷಿಣ ಚೀನಾ ಸಮುದ್ರದತ್ತ ಧಾವಿಸಿದೆ.
Next Story