ದೇವಸ್ಥಾನದಲ್ಲಿ ನಮಾಝ್ ಮಾಡಿರುವ ಆರೋಪ: ನಾಲ್ವರ ವಿರುದ್ಧ ಎಫ್ ಐಆರ್

ಫೋಟೊ ಕೃಪೆ: twitter.com
ಲಕ್ನೊ: ಮಥುರದ ದೇವಸ್ಥಾನದಲ್ಲಿ ಇಬ್ಬರು ನಮಾಝ್ ಮಾಡಿರುವ ಆರೋಪಕ್ಕೆ ಸಂಬಂಧಿಸಿ ನಾಲ್ಕು ಜನರ ವಿರುದ್ಧ ಉತ್ತರಪ್ರದೇಶ ಪೊಲೀಸರು ಎಫ್ ಐಆರ್ ದಾಖಲಿಸಿದ್ದಾರೆ.
ವರದಿಗಳ ಪ್ರಕಾರ, ದೇವಸ್ಥಾನದಲ್ಲಿ ಫೈಝಲ್ ಖಾನ್ ಹಾಗೂ ಚಾಂದ್ ಮುಹಮ್ಮದ್ ನಮಾಝ್ ಮಾಡಿದ್ದರು.
ಅಲೋಕ್ ರತನ್ ಹಾಗೂ ನೀಲೇಶ್ ಗುಪ್ತಾ ಈ ಚಿತ್ರಗಳನ್ನು ಸೆರೆ ಹಿಡಿದಿದ್ದರು. ದೇವಸ್ಥಾನದಲ್ಲಿ ನಮಾಝ್ ಮಾಡುವ ಚಿತ್ರವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಅಕ್ಟೋಬರ್ 29 ರಂದು ನಂದಗಾಂವ್ ಪ್ರದೇಶದ ನಂದ ಬಾಬಾ ಮಂದಿರದಲ್ಲಿ ಮಧ್ಯಾಹ್ನ 12:30ರ ಸುಮಾರಿಗೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಈ ಕುರಿತು ರವಿವಾರ ರಾತ್ರಿ ಮುಕೇಶ್ ಗೋಸ್ವಾಮಿ, ಶಿವಹರಿ ಗೋಸ್ವಾಮಿ ಹಾಗೂ ಕನ್ಹಾ ಎಂಬುವವರು ದೂರು ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಎಫ್ ಐ ಆರ್ ದಾಖಲಿಸಲಾಗಿದೆ.
Next Story





