ಎಸ್ಸೆಸ್ಸೆಫ್ ಉಡುಪಿ ಡಿವಿಷನ್‌ನಿಂದ ರಕ್ತದಾನ ಶಿಬಿರ

ಉಡುಪಿ, ನ.2: ಎಸ್ಸೆಸ್ಸೆಫ್ ಉಡುಪಿ ಡಿವಿಷನ್ ವತಿಯಿಂದ ಅಜ್ಜರಕಾಡು ಜಿಲ್ಲಾಸ್ಪತ್ರೆಯ ರಕ್ತನಿಧಿ ಕೇಂದ್ರದ ಸಹಭಾಗಿತ್ವದಲ್ಲಿ ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಬ್ಲಡ್ ಸೈಬೋ ಇದರ 4ನೆ ರಕ್ತದಾನ ಶಿಬಿರವು ರವಿವಾರ ಹೂಡೆಯ ದಾರುಸ್ಸಲಾಂ ಕಾಂಪ್ಲೆಕ್ಸ್ ಹಾಲ್ನಲ್ಲಿ ಜರಗಿತು.
ಹೂಡೆ ಖದೀಮಿ ಜಾಮಿಯ ಮಸೀದಿಯ ಖತೀಬ್ ಅಬೂಬಕ್ಕರ್ ಲತೀಪಿ ದುವಾ ನೆರವೇರಿಸಿದರು. ಕಾರ್ಯಕ್ರಮವನ್ನು ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಅಧ್ಯಕ್ಷ ಶಬ್ಬೀರ್ ಸಖಾಫಿ ಉಚ್ಚಿಲ ಉದ್ಘಾಟಿಸಿದರು. ಎಸ್‌ವೈಎಸ್ ಉಡುಪಿ ಜಿಲ್ಲಾ ಕಾರ್ಯದರ್ಶಿ ಅಡ್ವಕೇಟ್ ಹಂಝತ್ ಹೆಜಮಾಡಿ ಹಾಗೂ ವೈದ್ಯ ಡಾ. ರಫೀಕ್ ಹೂಡೆ ಮಾತನಾಡಿದರು.
ಇದೇ ಸಂದರ್ಭದಲ್ಲಿ ಕೋವಿಡ್-19 ಮೃತರ ದಫನ ಕಾರ್ಯದಲ್ಲಿ ಭಾಗ ವಹಿಸಿದ ಡಿವಿಷನ್ ನಾಯಕರಿಗೆ, ಲಾಕ್‌ಡಾನ್ ಸಮಯದಲ್ಲಿ ಆಪತ್ಬಾಂದ ವರಾಗಿ ಸೇವೆ ಸಲ್ಲಿಸಿದ ಸಂಘಟನಾ ಕಾರ್ಯಕರ್ತರಿಗೆ ಡಿಫೆನ್ಸ್ ಫೊರ್ಸ್ ಹೆಲ್ಪ್ಡೆಸ್ಕ್ನಿಂದ ಸನ್ಮಾನಿಸಲಾಯಿತು.
ಡಿವಿಷನ್ ಎಸ್‌ಟಿಂ ಮರ್ಹೂಂ ಸಪ್ವಾನ್ ರಂಗನಕೆರೆ ಪ್ರಶಸ್ತಿ ಪ್ರದಾನ, ಮತ್ತು ಅಗಲಿದ ನಾಯಕರ ಅನುಸ್ಮರಣೆ ಹಾಗೂ ಸ್ಪರ್ಧಾ ವಿಜೇತ ವಿದ್ಯಾರ್ಥಿ ಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ಶಿಬಿರದಲ್ಲಿ ಒಟ್ಟು 105 ಯುನಿಟ್ ರಕ್ತ ಸಂಗ್ರಹ ಮಾಡಲಾಯಿತು.
ಜಿಲ್ಲಾ ಬ್ಲಡ್ ಸೈಬೋ ಚೇರ್ಮೆನ್ ಮಜೀದ್ ಹನೀಪಿ ಕಾಪು, ಡಿವಿಷನ್ ಚೇರ್ಮೆನ್ ಕಯ್ಯೂಮ್ ಮಲ್ಪೆ, ಖದೀಮಿ ಜಾಮಿಯ ಮಸೀದಿ ಅಧ್ಯಕ್ಷ ಉಮರ್ ಸಾಹೇಬ್, ಮುಸ್ಲಿಂ ಜಮಾಅತ್ ಉಡುಪಿ ತಾಲೂಕು ಕಾರ್ಯ ದರ್ಶಿ ರಹಮತುಲ್ಲಾ ಹೂಡೆ, ದಾರುಸ್ಸಲಾಂ ಸಂಸ್ಥೆ ಅಧ್ಯಕ್ಷ ಅಶ್ರಫ್ ಜಿ., ಉಸ್ತಾದ್ ಸಾದಿಕ್, ಜಿಲ್ಲಾ ಮುಸ್ಲಿಂ ಜಮಾಅತ್ ಕಾರ್ಯದರ್ಶಿ ಸುಬುಹಾನ್ ಹೊನ್ನಾಳ, ಡಿವಿಷನ್ ಗೌರವ ಸಲಹೆಗಾರ ರಝಾಕ್ ಉಸ್ತಾದ್, ದ.ಕ. ಜಿಲ್ಲಾ ಬ್ಲಡ್ ಸೈಬೋ ನಾಯಕರಾದ ಕರೀಂ ಕದ್ಕಾರ್, ಅಲ್ತಾಫ್ ಶಾಂತಿಬಾಗ್, ರಿಝ್ವನ್ ಕೃಷ್ಣಾಪುರ, ಹಕೀಂ ಪೂಮಣ್ಣು, ಹನೀಪ್ ಅಹ್ಸನಿ ಖಾಮಿಲ್ ಸಖಾಪಿ ಹಾಲಾಡಿ, ಫಾರೂಕ್ ರಂಗನಕೆರೆ, ಕಟಪಾಡಿ ಸೆಕ್ಟರ್ ಅಧ್ಯಕ್ಷ ಆಸೀಪ್ ಸರಕಾರಿಗುಡ್ಡೆ, ಬ್ರಹ್ಮಾವರ ಸೆಕ್ಟರ್ ಅಧ್ಯಕ್ಷ ಶಂಶುದ್ದೀನ್ ರಂಗನಕೆರೆ, ಮಣಿಪಾಲ ಸೆಕ್ಟರ್ ಅಧ್ಯಕ್ಷ ಸಮೀರ್ ಮಿಸ್ಬಾಹಿ ನೇಜಾರು, ಡಿವಿಷನ್ ಉಪಾಧ್ಯಕ್ಷ ಮಜೀದ್ ಕಟಪಾಡಿ, ಶಾಹುಲ್ ದೊಡ್ಡಣಗುಡ್ಡೆ, ಕೋಶಾಧಿಕಾರಿ ನಝೀರ್ ಸಾಸ್ತಾನ, ಕಾರ್ಯದರ್ಶಿಗಳಾದ ಇಬ್ರಾಹಿಂ ಆರ್.ಕೆ., ನವಾಝ್ ಉಡುಪಿ, ಹೂಡೆ ಶಾಖಾಧ್ಯಕ್ಷ ಸಿಹಾನ್, ಕಾರ್ಯದರ್ಶಿ ಫಾಯಿಝ್ ಉಪಸ್ಥಿತರಿದ್ದರು.
ಎಸ್ಸೆಸ್ಸೆಫ್ ಉಡುಪಿ ಡಿವಿಷನ್ ಅಧ್ಯಕ್ಷ ಸೈಯ್ಯದ್ ಯೂಸುಫ್ ತಂಙಲ್ ಹೂಡೆ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಬ್ಲಡ್ ಸೈಬೋ ಕನ್ವೀನರ್ ಇಮ್ತಿಯಾಝ್ ಹೊನ್ನಾಳ ಸ್ವಾಗತಿಸಿದರು. ಡಿವಿಷನ್ ಪ್ರಧಾನ ಕಾರ್ಯದರ್ಶಿ ಸಿದ್ದೀಕ್ ಸಂತೋಷ್ ನಗರ ವಂದಿಸಿದರು. ಜಿಲ್ಲಾ ಕಾರ್ಯದರ್ಶಿ ನಾಸೀರ್ ಭದ್ರಗಿರಿ ಕಾರ್ಯಕ್ರಮ ನಿರೂಪಿಸಿದರು.







