ರಸಪ್ರಶ್ನೆ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ

ಉಡುಪಿ, ನ.2: ಕುತ್ಪಾಡಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯು ರ್ವೇದ ಕಾಲೇಜು ಮತ್ತು ಆಸ್ಪತ್ರೆಯ ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆ, ಉಡುಪಿ ವಿಭಾಗವು ಇತ್ತೀಚೆಗೆ ಏಡ್ಸ್ ಮತ್ತು ರಕ್ತದಾನ ವಿಷಯದಲ್ಲಿ ಏರ್ಪಡಿಸಲಾದ ಜಿಲ್ಲಾ ಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ಕಾಲೇಜಿನ ಕಿರುವೈದ್ಯೆ ಡಾ. ಸುದೇಹಿ ವಿ.ಆಚಾರ್ಯ ದ್ವಿತೀಯ ಸ್ಥಾನವನ್ನುಳಿಸಿ ರಾಜ್ಯಮಟ್ಟಕ್ಕೆ ಆಯ್ಕೆ ಯಾಗಿದ್ದಾರೆ.
ಯೂತ್‌ರೆಡ್ ಕ್ರಾಸ್ ಸದಸ್ಯೆ ಡಾ.ಸ್ನೇಹ ಹಾಗೂ ಡಾ.ಸುದೇಹಿ ವಿ.ಆಚಾರ್ಯ ಯೂತ್ ರೆಡ್‌ಕ್ರಾಸ್ ವಿಭಾಗದ ಮುಖ್ಯಸ್ಥ ಡಾ.ಮೊಹಮ್ಮದ್ ಫೈಸಲ್ ಮಾರ್ಗದರ್ಶನದಲ್ಲಿ ಈ ಸ್ಪರ್ಧೆಯಲ್ಲಿ ಭಾಗವಹಿಸಿದರು. ಜಿಲ್ಲೆಯ ವಿವಿಧ ಕಾಲೇಜುಗಳಿಂದ ಸುಮಾರು 45 ವಿದ್ಯಾರ್ಥಿಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಜಿಲ್ಲಾ ಏಡ್ಸ್ ನಿಯಂತ್ರಣ ಅಧಿಕಾರಿ ಡಾ.ಚಿದಾನಂದ ಸಂಜು ಹಾಗೂ ಜಿಲ್ಲಾ ಏಡ್ಸ್ ಕಾರ್ಯಕ್ರಮ ಅಧಿಕಾರಿ ಡಾ.ಮಹಾಬಲ ವಿಜೇತರಿಗೆ 2000 ರೂ. ನಗದು ಬಹುಮಾನವನ್ನು ನೀಡಿ ಗೌರವಿಸಿದರು. ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜಿನ ಪ್ರಾಂಶುಪಾಲ ಡಾ.ಜಿ. ಶ್ರೀನಿವಾಸ ಆಚಾರ್ಯ ಸ್ಪರ್ಧಾಳುಗಳನ್ನು ಅಭಿನಂದಿಸಿದರು.





