ಕಾಟಿಪಳ್ಳದಲ್ಲಿ ರಾಜ್ಯೋತ್ಸವ
ಮಂಗಳೂರು, ನ.2: ಕಾಟಿಪಳ್ಳದ ಬ್ರಹ್ಮಶಿ ನಾರಾಯಣ ಗುರು ಶಿಕ್ಷಣ ಸಂಸ್ಥೆ ಯಲ್ಲಿ 65ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ಸಂಸ್ಥೆಯ ಸಂಚಾಲಕ ಅರುಣ್ ಕುಮಾರ್ ಪಿ. ಉದ್ಘಾಟಿಸಿದರು. ದಿನದ ವಿಶೇಷತೆ ಕುರಿತು ಗುಣವತಿ ರಮೇಶ್ ಮಾತನಾಡಿದರು.
ವೇದಿಕೆಯಲ್ಲಿ ಪ.ಪೂ.ಕಾಲೇಜಿನ ಪ್ರಾಂಶುಪಾಲ ಉಮೇಶ್ ಕರ್ಕೇರ, ಮುಖ್ಯ ಶಿಕ್ಷಕಿ ಪುಷ್ಪಲತಾ, ಮುಖ್ಯ ಶಿಕ್ಷಕ ಮಹಾವೀರ ಜೈನ್ ಉಪಸ್ಥಿತರಿ ದ್ದರು.ಶಿಕ್ಷಕಿ ಪ್ರಮೀಳಾ ವಂದಿಸಿದರು. ಶಿಕ್ಷಕಿ ಅಕ್ಷತಾ ಕೇಶವ್ ಕಾರ್ಯಕ್ರಮ ನಿರೂಪಿಸಿದರು.
Next Story





