Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಕಾಬೂಲ್ ವಿವಿಯಲ್ಲಿ ಪುಸ್ತಕ ಮೇಳದ ಮೇಲೆ...

ಕಾಬೂಲ್ ವಿವಿಯಲ್ಲಿ ಪುಸ್ತಕ ಮೇಳದ ಮೇಲೆ ಉಗ್ರರ ದಾಳಿ, 25 ಜನರ ಮೃತ್ಯು

ವಾರ್ತಾಭಾರತಿವಾರ್ತಾಭಾರತಿ2 Nov 2020 10:47 PM IST
share
ಕಾಬೂಲ್ ವಿವಿಯಲ್ಲಿ ಪುಸ್ತಕ ಮೇಳದ ಮೇಲೆ ಉಗ್ರರ ದಾಳಿ, 25 ಜನರ ಮೃತ್ಯು

ಕಾಬೂಲ್(ಅಫ್ಘಾನಿಸ್ತಾನ್),ನ.2: ದೇಶದ ಅತ್ಯಂತ ದೊಡ್ಡ ಶಿಕ್ಷಣ ಸಂಸ್ಥೆಯಾಗಿರುವ ಇಲ್ಲಿಯ ಕಾಬೂಲ್ ವಿವಿಯಲ್ಲಿ ಸೋಮವಾರ ಆಯೋಜಿಸಲಾಗಿದ್ದ ಪುಸ್ತಕ ಮೇಳದ ಮೇಲೆ ಉಗ್ರರು ದಾಳಿ ನಡೆಸಿದ್ದಾರೆ. ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ಸುಮಾರು ಒಂದು ಗಂಟೆ ಕಾಲ ನಡೆದ ಗುಂಡಿನ ದಾಳಿಯಲ್ಲಿ ಕನಿಷ್ಠ 25 ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ. ಅಫ್ಘಾನಿಸ್ತಾನಕ್ಕೆ ಇರಾನ್ ರಾಯಭಾರಿಯಾಗಿರುವ ಬಹದೂರ್ ಅಮಿನಿಯಾನ್ ಸೇರಿದಂತೆ ಹಲವಾರು ಗಣ್ಯರು ದಾಳಿ ಸಂದರ್ಭ ಪುಸ್ತಕ ಮೇಳದಲ್ಲಿ ಉಪಸ್ಥಿತರಿದ್ದರು.

ವಿವಿ ಕ್ಯಾಂಪಸ್‌ನಲ್ಲಿ ನಡೆದ ದಾಳಿ ಸಂದರ್ಭ ಮೃತರ ಸಂಖ್ಯೆಯನ್ನು ಆಂತರಿಕ ಸಚಿವಾಲಯದ ವಕ್ತಾರ ತಾರೀಖ್ ಆರಿಯಾನ್ ಅವರು ತಿಳಿಸಿಲ್ಲವಾದರೂ 20 ಜನರು ಮೃತಪಟ್ಟಿದ್ದಾರೆಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ದಾಳಿಯಲ್ಲಿ ಭಾಗಿಯಾಗಿದ್ದ ಎಲ್ಲ ಮೂವರು ಉಗ್ರರನ್ನು ಹೊಡೆದುರುಳಿಸಲಾಗಿದೆ ಎಂದು ಆರಿಯಾನ್ ತಿಳಿಸಿದರು.

ಸಂಜೆಯ ವೇಳೆಗೆ ದಾಳಿಯ ಕುರಿತು ಕೆಲವು ವಿವರಗಳು ಬಹಿರಂಗಗೊಂಡಿವೆ. ಇದೇ ವೇಳೆ ತಾನು ದಾಳಿಯಲ್ಲಿ ಭಾಗಿಯಾಗಿರುವುದನ್ನು ನಿರಾಕರಿಸಿ ತಾಲಿಬಾನ್ ಹೇಳಿಕೆಯೊಂದನ್ನು ಹೊರಡಿಸಿದೆ.

ಬಂಡುಕೋರರು ಅಮೆರಿಕ ಬೆಂಬಲಿತ ಅಫ್ಘಾನ್ ಸರಕಾರದೊಂದಿಗೆ ಮುಂದುವರಿಸಿರುವ ಶಾಂತಿ ಮಾತುಕತೆಗಳ ನಡುವೆಯೇ ಈ ದಾಳಿ ನಡೆದಿದೆ. ದೇಶದಲ್ಲಿ ಪ್ರತಿದಿನವೂ ರಕ್ತಪಾತ ಮುಂದುವರಿದಿದ್ದರೂ,ಇಸ್ಲಾಮಿಕ್ ಸ್ಟೇಟ್‌ಗೆ ನಿಷ್ಠ ಗುಂಪುಗಳು ಶಿಟ್ಟೆಗಳ ಮೇಲೆ ದಾಳಿಗಳನ್ನು ನಡೆಸುತ್ತಿದ್ದರೂ ಅಮೆರಿಕವು ತನ್ನ ಅತ್ಯಂತ ಸುದೀರ್ಘ ಯುದ್ಧದಿಂದ ಹಿಂದೆ ಸರಿಯಲು ನೆರವಾಗುವ ನಿಟ್ಟಿನಲ್ಲಿ ಮಾತುಕತೆಗಳು ಅರಬ್ ದೇಶ ಕತರ್‌ನಲ್ಲಿ ನಡೆಯುತ್ತಿವೆ.

ಗುಂಡಿನ ಕಾಳಗದ ಐದು ಗಂಟೆಗಳ ಬಳಿಕವೂ ವಿವಿಯ ಸುತ್ತಲಿನ ಖಾಲಿ ರಸ್ತೆಗಳಲ್ಲಿ ಗ್ರೆನೇಡ್ ಸ್ಫೋಟಗಳು ಮತ್ತು ಗುಂಡು ಹಾರಾಟದ ಶಬ್ದಗಳು ಆಗಾಗ್ಗೆ ಕೇಳಿಬರುತ್ತಲೇ ಇದ್ದವು. ಅಫ್ಘಾನ್ ಯೋಧರು ವಿವಿಗೆ ಸರ್ಪಗಾವಲು ಹಾಕಿದ್ದಾರೆ. ದಾಳಿಯ ಸಂದರ್ಭ ಹಲವಾರು ವಿದ್ಯಾರ್ಥಿಗಳು ಸ್ಥಳದಿಂದ ಪರಾರಿಯಾಗುವ ಮೂಲಕ ಪ್ರಾಣ ಉಳಿಸಿಕೊಂಡಿದ್ದಾರೆ.

ಪಿಸ್ತೂಲುಗಳು ಮತ್ತು ಕಲಾಶ್ನಿಕೋವ್ ಅಸಾಲ್ಟ್ ರೈಫಲ್‌ಗಳಿಂದ ಸಜ್ಜಿತರಾಗಿದ್ದ ಉಗ್ರರು ಗುಂಡುಗಳನ್ನು ಹಾರಿಸುತ್ತಿದ್ದನ್ನು ತಾನು ಕಂಡಿದ್ದಾಗಿ ವಿವಿಯ ವಿದ್ಯಾರ್ಥಿ ಅಹ್ಮದ್ ಸಮೀಮ್ ಸುದ್ದಿಗಾರರಿಗೆ ತಿಳಿಸಿದ. ದೇಶದ ಅತ್ಯಂತ ಹಳೆಯ ವಿವಿಯಾಗಿರುವ ಇಲ್ಲಿ ಸುಮಾರು 17,000 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.

ಪುಸ್ತಕ ಮೇಳದ ಬಗ್ಗೆ ಚರ್ಚಿಸಲು ಅಫ್ಘಾನ್ ಅಧಿಕಾರಿಗಳು ನಿರಾಕರಿಸಿದರು. ಅಮಿನಿಯನ್ ಮತ್ತು ರಾಯಭಾರಿ ಕಚೇರಿಯ ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥ ಮೊಜ್ತಾಬಾ ನೂರೂಝಿ ಅವರು ಪುಸ್ತಕ ಮೇಳವನ್ನು ಉದ್ಘಾಟಿಸಲಿದ್ದಾರೆ. ಸುಮಾರು 40 ಇರಾನಿ ಪ್ರಕಾಶಕರೂ ಮೇಳದಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಇರಾನಿನ ಅರೆಸರಕಾರಿ ಐಎಸ್‌ಎನ್‌ಎ ಸುದ್ದಿಸಂಸ್ಥೆಯು ರವಿವಾರ ವರದಿ ಮಾಡಿತ್ತು. ಇರಾನಿನ ಸರಕಾರಿ ಟಿವಿಯು ದಾಳಿಯ ಸುದ್ದಿಯನ್ನು ಪ್ರಸಾರಿಸಿದೆಯಾದರೂ ತನ್ನ ಅಧಿಕಾರಿಗಳ ಬಗ್ಗೆ ಯಾವುದೇ ಮಾಹಿತಿಗಳನ್ನು ನೀಡಿಲ್ಲ.

ಈ ಹಿಂದೆ ಅಫ್ಘಾನಿಸ್ತಾನದಲ್ಲಿ ಇರಾನಿ ರಾಜತಾಂತ್ರಿಕರನ್ನು ಗುರಿಯಾಗಿಸಿಕೊಂಡು ಹಲವಾರು ದಾಳಿಗಳು ನಡೆದಿದ್ದು,ಇದು ಉಭಯ ದೇಶಗಳ ನಡುವೆ ಹೆಚ್ಚುಕಡಿಮೆ ಯುದ್ಧ ಸ್ಥಿತಿಯನ್ನು ಹುಟ್ಟುಹಾಕಿತ್ತು. 1998ರಲ್ಲಿ ಉತ್ತರ ಅಪಘಾನಿಸ್ತಾನದ ತನ್ನ ಕಾನ್ಸುಲೇಟ್ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಒಂಬತ್ತು ರಾಜತಾಂತ್ರಿಕರ ಸಾವುಗಳಿಗೆ ತಾಲಿಬಾನ್ ಹೊಣೆಯೆಂದು ಪ್ರತಿಪಾದಿಸಿದ್ದ ಇರಾನ್,ಉಭಯ ದೇಶಗಳ ನಡುವಿನ 950 ಕಿ.ಮೀ.ಉದ್ದದ ಗಡಿಗೆ ತನ್ನ ಸೇನೆಯನ್ನು ರವಾನಿಸಿತ್ತು.

ಇಂದಿನ ದಾಳಿಯ ಹೊಣೆಯನ್ನು ಯಾವುದೇ ಗುಂಪು ವಹಿಸಿಕೊಂಡಿಲ್ಲ,ಆದರೆ ಸಂಶಯದ ಮುಳ್ಳು ಇಸ್ಲಾಮಿಕ್ ಸ್ಟೇಟ್ ಗುಂಪಿನತ್ತ ನೆಟ್ಟಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X