ಕೊಕ್ರಾಡಿ: ಮಗುವಿನೊಂದಿಗೆ ತಂದೆ, ತಾಯಿ ಆತ್ಮಹತ್ಯೆಗೆ ಯತ್ನ
ಬೆಳ್ತಂಗಡಿ : ವೇಣೂರು ಸಮೀಪ ಕೊಕ್ರಾಡಿಯಲ್ಲಿ ಪತಿ, ಪತ್ನಿ ಮತ್ತು ಮಗು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದ್ದು, ಮಣಿಪಾಲ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಸೋಮವಾರ ರಾತ್ರಿ ನಡೆದಿದೆ.
ಆತ್ಮಹತ್ಯೆಗೆ ಯತ್ನಿಸಿದವರು ಕೊಕ್ರಾಡಿ ಗ್ರಾಮದ ಅತ್ರಾಜಲು ಬಳಿಯ ಭಾಸ್ಕರ ಶೆಟ್ಟಿಗಾರ್ ಎಂಬವರ ಪುತ್ರ ಚಂದ್ರಶೇಖರ ಶೆಟ್ಟಿಗಾರ್(35) ಆಶಾ (30) ಹಾಗೂ ಅವರ ಪುಟ್ಟ ಮಗು ಎಂದು ತಿಳಿದುಬಂದಿದೆ.
ವಿಷ ಸೇವಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿರುವುದೆಂದು ತಿಳಿದುಬಂದಿದ್ದು, ಸ್ಥಳೀಯರು ಇವರನ್ನು ಕಾರ್ಕಳ ಆಸ್ಪತ್ರೆಗೆ ಕೊಂಡೋಗಿ ಬಳಿಕ ಮಣಿಪಾಲ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪತಿ ಪತ್ನಿಯರ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ. ಘಟನೆಗೆ ನಿಖರ ಕಾರಣಗಳು ತಿಳಿದು ಬಂದಿಲ್ಲ. ವೇಣೂರು ಪೊಲೀಸರು ಸ್ಥಳಕ್ಕೆ ತೆರಳಿದ್ದು, ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
Next Story





