ಉಪಚುನಾವಣೆ: ಆರ್.ಆರ್.ನಗರದಲ್ಲಿ ನೀರಸ ಮತದಾನ
ಶಿರಾ ಕ್ಷೇತ್ರದಲ್ಲಿ 44.13 ಶೇ. ಹಕ್ಕು ಚಲಾವಣೆ

ಬೆಂಗಳೂರು, ನ.3: ಆಡಳಿತಾರೂಢ ಬಿಜೆಪಿ, ಪ್ರತಿಪಕ್ಷ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ತೀವ್ರ ಪೈಪೋಟಿ ಸೃಷ್ಟಿಸಿರುವ ತುಮಕೂರು ಜಿಲ್ಲೆಯ ಶಿರಾ ಹಾಗೂ ಬೆಂಗಳೂರಿನ ರಾಜರಾಜೇಶ್ವರಿ ನಗರ(ಆರ್.ಆರ್.ನಗರ) ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಮತದಾನ ಸಾಧಾರಣವಾಗಿ ಮುಂದುವರಿದಿದೆ.
ಆರ್.ಆರ್.ನಗರ ಕ್ಷೇತ್ರದಲ್ಲಿ ಮತದಾನಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇಲ್ಲಿ ಮಧ್ಯಾಹ್ನ 1 ಗಂಟೆಯ ವೇಳೆ 26.58 ಶೇ. ಹಕ್ಕು ಚಲಾವಣೆಯಾಗಿದೆ. ಇದೇ ವೇಳೆ ಶಿರಾ ಕ್ಷೇತ್ರದಲ್ಲಿ ಮಧ್ಯಾಹ್ನ 1 ಗಂಟೆಯ ವೇಳೆ 44.13 ಶೇ. ಮತದಾನವಾಗಿದೆ
Next Story





