ದಿವ್ಯಶ್ರೀ ಮಣಿಪಾಲಗೆ ಶ್ರೀಮಹಾದೇವ ಪ್ರಶಸ್ತಿ-2020

ಉಡುಪಿ, ನ.3: ಯುವ ಪ್ರತಿಭೆ ದಿವ್ಯಶ್ರೀ ಮಣಿಪಾಲ ಇವರಿಗೆ ಬಿಜೂರಿನ ಶ್ರೀಮಹಾದೇವ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ 2020ನೇ ಸಾಲಿನ ಶ್ರೀ ಮಹಾದೇವ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಸರಿಗಮ ಭಾರತಿ ಸಂಗೀತ ವಿದ್ಯಾಲಯದ ನವರಾತ್ರಿಯ ವಿಜಯದಶಮಿ ನಾದೋಪಾಸನೆಯ ಪಂಚರತ್ನ ಸಂಗೀತ ಗೋಷ್ಠಿ, ದೇವೀ ನವಾವರಣ ಕೃತಿಗಳ ಪ್ರಸ್ತುತಿಗೆ ಮೊದಲು ಈ ಪ್ರಶಸ್ತಿ ಪ್ರದಾನ ಸಮಾರಂಭ ಪರ್ಕಳದ ಸರಿಗಮ ಭಾರತಿ ವಿದ್ಯಾಲಯದಲ್ಲಿ ನಡೆಯಿತು.
ಕಲಾಶಾಲೆಯ ಸಂಗೀತ ಗುರು ವಿದುಷಿ ಉಮಾ ಉದಯಶಂಕರ್ ಕಾರ್ಯಕ್ರಮವನ್ನು ಸಂಘಟಿಸಿದ್ದರು. ವೇದಿಕೆಯಲ್ಲಿ ಡಾ.ಗಣಪತಿ ಜೋಯಿಸ, ಡಾ ಉದಯ ಶಂಕರ್, ರಾಘವೇಂದ್ರ ಆಚಾರ್ಯ, ರಾಮಚಂದ್ರ ಭಟ್, ಉಮಾಶಂಕರಿ ಹಾಗು ವಿವಿಧ ಗಣ್ಯರು ಉಪಸ್ಥಿತರಿದ್ದರು.
ಬೆಳಗ್ಗೆಯಿಂದ ಪುಟಾಣಿಗಳಿಂದ ಹಾಗೂ ನುರಿತ ಕಲಾವಿದರಿಂದ ಸಂಗೀತ ಸುಧೆ ಜರುಗಿತು. ಕೊರೋನಾ ವಾರಿಯರ್ಸ್ ಡಾ.ಅಭಯನಾರಾಯಣ ಹಾಗೂ ಡಾ.ಶ್ರೀಕರಿ ಅಭಯನಾರಾಯಣ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಸಮಾರೋಪ ಭಾಷಣ ಮಾಡಿದರು.
Next Story





