ಸುರೇಂದ್ರ ಹತ್ಯೆ ಪ್ರಕರಣ: ಮತ್ತಿಬ್ಬರು ಆರೋಪಿಗಳ ಬಂಧನ

ಪ್ರತೀಕ್ ಕೋಟ್ಯಾನ್, ಜಯೇಶ್
ಬಂಟ್ವಾಳ, ನ.3: ಇಲ್ಲಿನ ಭಂಡಾರಿ ಬೆಟ್ಟುವಿನ ವಸ್ತಿ ಅಪಾರ್ಟ್ ಮೆಂಟ್ ನಲ್ಲಿ ಚಿತ್ರನಟ ಸುರೇಂದ್ರ ಭಂಡಾರಿ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಿಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ಪ್ರತೀಕ್ ಕೋಟ್ಯಾನ್(27) ಮತ್ತು ಮಂಗಳೂರು ತಾಲೂಕಿನ ಬೊಂದೇಲ್ ನ ಕೊಂಚಾಡಿ ನಿವಾಸಿ ಜಯೇಶ್ ಯಾನೆ ಸಚ್ಚು (28) ಬಂಧಿತ ಆರೋಪಿಗಳು. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಂಗ ಬಂಧನ ವಿಧಿಸಿದೆ.
ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ 9 ಮಂದಿ ಆರೋಪಿಗಳ ಬಂಧನ ಆಗಿದೆ. ಪ್ರಕರಣದ ಪ್ರಮುಖ ಆರೋಪಿಗಳಿಗೆ ಹತ್ಯೆಯ ಬಳಿಕ ವಿವಿಧೆಡೆ ತಲೆಮೆರೆಸಿಕೊಳ್ಳಲು ಹಾಗೂ ವಾಹನ ವ್ಯವಸ್ಥೆಯನ್ನು ಮಾಡಿದ ಆರೋಪ ಇವರ ಮೇಲಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆಯು ಮುಂದುವರಿದಿರುತ್ತದೆ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Next Story





