ಸಮಾಜವಾದಿ ಪಕ್ಷ ಸೇರಿದ ಅನ್ನು ಟಂಡನ್

ಲಕ್ನೋ, ನ. 2: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ರಾಜೀನಾಮೆ ಸಲ್ಲಿಸಿದ ದಿನಗಳ ಬಳಿಕ ಅನ್ನು ಟಂಡನ್ ಸೋಮವಾರ ಸಮಾಜವಾದಿ ಪಕ್ಷಕ್ಕೆ ಸೇರಿದ್ದಾರೆ. ಇಲ್ಲಿನ ಸಮಾಜವಾದಿ ಪಕ್ಷದ ಕೇಂದ್ರ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಅನ್ನು ಟಂಡನ್ ಪಕ್ಷ ಸೇರಿದರು.
ಸಮಾಜವಾದಿ ಪಕ್ಷದ ವರಿಷ್ಠ ಅಖಿಲೇಶ್ ಯಾದವ್ ಅವರನ್ನು ಸ್ವಾಗತಿಸಿದರು. ನಾಯಕರಲ್ಲಿ ನಿರೀಕ್ಷಿಸಬಹುದಾದ ಎಲ್ಲ ಗುಣಗಳೊಂದಿಗೆ ಪ್ರಗತಿಪರ ಹಾಗೂ ದೂರದೃಷ್ಟಿ ಇರುವ ಯುವ ನಾಯಕ ಅಖಿಲೇಶ್ ಯಾದವ್ ಎಂದು ಅನ್ನು ಟಂಡನ್ ಹೇಳಿದರು. ಅಖಿಲೇಶ್ ಯಾದವ್ ಹಾಗೂ ಅವರ ಕಾರ್ಯಾಚರಣೆಯ ಶೈಲಿಗೆ ಮನಸೋತು ತಾನು ಸಮಾಜವಾದಿ ಪಕ್ಷ ಸೇರಿದೆ ಎಂದು ಹೇಳಿರುವ ಅನ್ನು ಟಂಡನ್, ಇಂದಿನಿಂದ ಅಖಿಲೇಶ್ ಯಾದವ್ ಅವರನ್ನು ಮುಖ್ಯಮಂತ್ರಿ ಮಾಡುವ ದಿಶೆಯಲ್ಲಿ ತಾನು ಕಾರ್ಯ ನಿರ್ವಹಿಸಲಿದ್ದೇನೆ ಎಂದರು.
Next Story





