ಯುರೋಪ್‌ಗೆ ಹೊಸ ಕೊರೋನ ಅಲೆಗಳು ಅಪ್ಪಳಿಸುವ ಅಪಾಯ : ಫ್ರಾನ್ಸ್ ಪರಿಣತರ ಎಚ್ಚರಿಕೆ

ಪ್ಯಾರಿಸ್ (ಫ್ರಾನ್ಸ್), ನ. 3: ಮುಂದಿನ ವರ್ಷ ಕೊರೋನ ವೈರಸ್‌ನ ಇನ್ನಷ್ಟು ಹೊಸ ಅಲೆಗಳು ಯುರೋಪ್‌ಗೆ ಅಪ್ಪಳಿಸುವ ಅಪಾಯವಿದೆ ಎಂದು ಫ್ರಾನ್ಸ್‌ನ ವಿಜ್ಞಾನ ಮಂಡಳಿ ಎಚ್ಚರಿಸಿದೆ.
ಯುರೋಪ್ ಈಗಾಗಲೇ ಮಾರಕ ಸಾಂಕ್ರಾಮಿಕದ ಎರಡನೇ ಅಲೆಯ ಹೊಡೆತಕ್ಕೆ ತುತ್ತಾಗಿದೆ.
ಯುರೋಪ್‌ನಾದ್ಯಂತ ಆಂಶಿಕ ಲಾಕ್‌ಡೌನ್‌ಗಳನ್ನು ಮರುಹೇರಿದರೂ ಹೊಸ ಸೋಂಕು ಪ್ರಕರಣಗಳ ದರವು ಕಡಿಮೆಯಾಗುತ್ತದೆ ಎಂದು ಮಂಡಳಿ ಅಭಿಪ್ರಾಯಪಟ್ಟಿದೆ.
ಮಂಡಳಿಯ ಶಿಫಾರಸುಗಳ ಆಧಾರದಲ್ಲಿ, ಕಳೆದ ವಾರ ಫ್ರಾನ್ಸ್ ಅಧ್ಯಕ್ಷ ಇಮಾನುಯೆಲ್ ಮ್ಯಾಕ್ರೋನ್ ಡಿಸೆಂಬರ್ 1ರವರೆಗೆ ರಾಷ್ಟ್ರವ್ಯಾಪಿ ಲಾಕ್‌ಡೌನನ್ನು ಮರುಹೇರಿದ್ದಾರೆ.
ಬ್ರಿಟಿಶ್ ಪ್ರಧಾನಿ ಬೊರಿಸ್ ಜಾನ್ಸನ್ ಶನಿವಾರ ಇಂಗ್ಲೆಂಡ್‌ನಾದ್ಯಂತ ಒಂದು ತಿಂಗಳ ಕಾಲ ಆಂಶಿಕ ಲಾಕ್‌ಡೌನನ್ನು ಮರುಹೇರಿದ್ದಾರೆ. ಜರ್ಮನಿಯೂ ಸೋಮವಾರದಿಂದ ಇದೇ ಕ್ರಮಗಳನ್ನು ಅನುಸರಿಸಿದೆ. ಸ್ಪೇನ್ ರಾತ್ರಿ ಕರ್ಫ್ಯೂವನ್ನು ವಿಧಿಸಿದರೆ, ಇಟಲಿ ಶೀಘ್ರದಲ್ಲೇ ಹೊಸ ನಿರ್ಬಂಧಗಳನ್ನು ಘೋಷಿಸುವ ನಿರೀಕ್ಷೆಯಿದೆ.
Next Story





