ಕಲ್ಲಡ್ಕ ಪ್ರಭಾಕರ ಭಟ್ ಹೇಳಿಕೆಗೆ ಸಿಪಿಎಂ ಖಂಡನೆ
ಉಡುಪಿ, ನ.4: ಉಳ್ಳಾಲದಲ್ಲಿ ಪಾಕಿಸ್ತಾನ ನಿರ್ಮಾಣ ಎಂಬ ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಅವರ ಕೋಮು ಭಾವನೆ ಕೆರಳಿಸುವ ಹೇಳಿಕೆಯನ್ನು ಸಿಪಿಐಎಂ ಉಡುಪಿ ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿಸಿದೆ.
ಅಧಿಕಾರದಲ್ಲಿದ್ದರೂ ಜನರ ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಾಗದ ಬಿಜೆಪಿ ಮತ್ತು ಆರೆಸ್ಸೆಸ್ ಕೋಮು ಭಾವನೆ ಕೆರಳಿಸಿ ಜನರ ನಡುವೆ ಅಶಾಂತಿ ಹುಟ್ಟು ಹಾಕುವ ಪ್ರಯತ್ನ ಮಾಡುತ್ತಿದೆ. ಜನರು ಇಂತಹ ಹೇಳಿಕೆಯನ್ನು ತಿರಸ್ಕರಿಸಿ, ಶಾಂತಿಯನ್ನು ಕಾಪಾಡಿ ಐಕ್ಯತೆ ಪ್ರದರ್ಶಿಸ ಬೇಕಿದೆ. ಅದೇ ಕಲ್ಲಡ್ಕ ಭಟ್ಟರಿಗೆ ನೀಡುವ ನಿಜವಾದ ಉತ್ತರ ಎಂದು ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
Next Story





