ಗಾಂಜಾ ಸೇವನೆ: ಓರ್ವ ವಶಕ್ಕೆ
ಕುಂದಾಪುರ, ನ.4: ಕೊಟೇಶ್ವರ ಜಂಕ್ಷನ್ ಬಳಿ ಅ.28ರಂದು ಬೆಳಗ್ಗೆ ಗಾಂಜಾ ಸೇವನೆ ಮಾಡುತ್ತಿದ್ದ ಕೋಟೇಶ್ವರ ಮಲ್ಲಣ್ಣನಹಿತ್ಲುವಿನ ಮುಹಮ್ಮದ್ ಸಫಾನ್ (32) ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಈತನನ್ನು ಮಣಿಪಾಲ ಕೆಎಂಸಿಯ ಫೊರೆನ್ಸಿಕ್ ವಿಭಾಗದ ಮುಂದೆ ಹಾಜರು ಪಡಿಸಿದ್ದು, ಆತನನ್ನು ಪರೀಕ್ಷಿಸಿದ ವೈದ್ಯರು ಆತ ಗಾಂಜಾ ಸೇವಿಸಿ ರುವ ಬಗ್ಗೆ ದೃಢಪಟ್ಟಿರುವುದಾಗಿ ವರದಿ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





