ಬೆಳ್ತಂಗಡಿ : ತೋಟಗಾರಿಕೆ ಇಲಾಖೆಯ ನೂತನ ಕಟ್ಟಡ ಉದ್ಘಾಟನೆ

ಬೆಳ್ತಂಗಡಿ : ಕೃಷಿಕರಿಗೆ ವರದಾನವಾದ ಯೋಜನೆಗಳ ಅನುಷ್ಠಾಗೊಳಿಸುವಲ್ಲಿ ಕೆಂದ್ರ ಹಾಗೂ ರಾಜ್ಯ ಸರಕಾರ ಮುತುವರ್ಜಿ ವಹಿಸಿದೆ. ತಾಲೂಕಿನಲ್ಲಿರುವ ಅನೇಕ ಸರಕಾರಿ ಇಲಾಖೆ ಕಟ್ಟಡಗಳ ಪುನಶ್ಚೇತನಕ್ಕೆ ಆದ್ಯತೆ ನೀಡಲಾಗುವುದು ಎಂದು ಶಾಸಕ ಹರೀಶ್ ಪೂಂಜ ಹೇಳಿದರು.
ತೋಟಗಾರಿಕೆ ಇಲಾಖೆ ರಾಜ್ಯವಲಯ ಮತ್ತು ಜಿ.ಪಂ. ಅನುದಾನದಲ್ಲಿ ನ.4 ರಂದು ಬೆಳ್ತಂಗಡಿ ತೋಟಗಾರಿಕೆ ಇಲಾಖೆ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದರು.
ವಿಧಾನಪರಿಷತ್ ಸದಸ್ಯರಾದ ಪ್ರತಾಪಸಿಂಹ ನಾಯಕ್, ಹರೀಶ್ ಕುಮಾರ್, ಜಿ.ಪಂ.ಸ್ಥಾಯಿ ಸಮಿತಿ ಅಧ್ಯಕ್ಷೆ ಮಮತಾ ಎಂ.ಶೆಟ್ಟಿ, ದ.ಕ. ಜಿಲ್ಲಾ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಎಚ್.ಆರ್.ನಾಯಕ್, ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಶಶಿಧರ್ ಎಂ.ಕಲ್ಮಂಜ, ಜಿ.ಪಂ. ಸದಸ್ಯರಾದ ಕೊರಗಪ್ಪ ನಾಯ್ಕ್, ಸೌಮ್ಯಲತಾ, ತಾ.ಪಂ. ಅಧ್ಯಕ್ಷೆ ದಿವ್ಯಜ್ಯೋತಿ, ಉಪಾಧ್ಯಕ್ಷೆ ವೇದಾವತಿ, ತಾ.ಪಂ. ಸದಸ್ಯರಾದ ಜಯಶೀಲಾ, ವಿಜಯ್ ಗೌಡ, ಲಕ್ಷ್ಮಿ ನಾರಾಯಣ, ಪುತ್ತೂರು ಸಹಾಯಕ ಯೋಟಗಾರಿಕೆ ನಿರ್ದೇಶಕ ಶಿವಪ್ರಕಾಶ್, ಬೆಳ್ತಂಗಡಿ ಸಹಾಯಕ ತೋಟಗಾರಿಕೆ ನಿರ್ದೇಶಕರಾದ ಸಂಜೀವ, ಲಿಖಿತ್ ರಾಜ್, ಕೃಷಿ ಇಲಾಖೆ ಸಹಾಯಕ ಕೃಷಿ ನಿರ್ದೇಶಕ ರಂಜಿತ್ ಕುಮಾರ್ ಟಿ.ಎನ್., ತಾ.ಪಂ. ಇಒ ಕುಸುಮಾಧರ್, ಪ್ರಭಾರ ಸಹಾಯಕ ತೋಟಗಾರಿಕೆ ಅಧಿಕಾರಿಗಳಾದ ಬೀಮಣ್ಣ ಸೊಡ್ಡಗಿ, ಮಲ್ಲಿನಾಥ್ ಬೀರದಾರ್, ಬಿಜೆಪಿ ಮಂಡಲ ಮಾಜಿ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಹಿರಿಯ ಕೃಷಿಕ ಶಾಂಭಟ್ ಉರುವಾಲು, ಸಿಬಂದಿಗಳು ಉಪಸ್ಥಿತರಿದ್ದರು. ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಸಿ.ಎಚ್.ಚಂದ್ರಶೇಖರ ಕಾರ್ಯಕ್ರಮ ಸಂಯೋಜಿಸಿದರು.





