ಗುಂಡು ಹಾರಿಸಿ ರೌಡಿಶೀಟರ್ ಬಂಧನ

ಹಾಸನ, ನ.4: ಮೂವರಿಗೆ ಚಾಕು ಇರಿದು ಪರಾರಿಯಾಗಿದ್ದ ರೌಡಿಶೀಟರ್ ಸುನೀಲ್ ಎಂಬಾತನಿಗೆ ಹಾಸನ ಗ್ರಾಮಾಂತರ ಪೊಲೀಸರು ಗುಂಡು ಹಾರಿಸಿ ಬಂಧಿಸಿರುವ ಘಟನೆ ಕೃಷ್ಣ ನಗರದ ಬಳಿ ನಡೆದಿದೆ.
ರೌಡಿ ಶೀಟರ್ ಸುನೀಲ್ ಇರುವ ಜಾಗದ ಕುರಿತು ಖಚಿತ ಮಾಹಿತಿ ಮೇರೆಗೆ ಹಾಸನ ನಗರದ ಸಮೀಪ ಕೃಷ್ಣ ನಗರದ ಬಳಿ ಪೊಲೀಸ್ ತಂಡ ಆಗಮಿಸಿದಾಗ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್ಸೈ ಬಸವರಾಜು ಮೇಲೆ ಎರಗಿ ಆರೋಪಿ ಸುನೀಲ್ ಚಾಕು ಇರಿದಿದ್ದಾನೆ. ಈ ವೇಳೆ ಸಿಪಿಐ ಸುರೇಶ್ ಅವರು ಏರ್‌ಫೈರ್ ಮಾಡಲು ಮುಂದಾದರು. ಬಳಿಕ ಪೊಲೀಸರ ಮೇಲೆ ದಾಳಿ ಮಾಡಲು ಯತ್ನಿಸಿದ ರೌಡಿ ಶೀಟರ್ ಕಾಲಿಗೆ ಗುಂಡು ಹಾರಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
Next Story





